ಕೇಂದ್ರ ಬಜೆಟ್ 2020: ನಿರೀಕ್ಷೆಗಳೇನು?

Update: 2020-01-30 08:02 GMT

ಹೊಸದಿಲ್ಲಿ: ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಬಜೆಟ್‍ ನಿಂದ ಆಟೊಮೊಬೈಲ್ ಕ್ಷೇತ್ರ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಈಗಾಗಲೇ ಬೇಡಿಕೆ ಕುಸಿತದಿಂದ ಸಮಸ್ಯೆ ಎದುರಿಸುತ್ತಿರುವ ಈ ಕ್ಷೇತ್ರ ಬಜೆಟ್ ಕುರಿತಂತೆ ಸಾಕಷ್ಟು ಆಶಾವಾದ ಹೊಂದಿದೆ. ಈ ಕ್ಷೇತ್ರದ ಕೆಲವೊಂದು ಪ್ರಮುಖ ಬೇಡಿಕೆಗಳು ಇಂತಿವೆ.

1. ವಾಹನಗಳ ಮೇಲಿನ ಜಿಎಸ್‍ಟಿ ದರಗಳನ್ನು ಈಗಿನ ಶೇ 28ರಿಂದ ಶೇ 18ಕ್ಕೆ ಇಳಿಸಬೇಕು.

2. ದೇಶೀಯವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಉತ್ತೇಜಿಸಲು  ಆಟೋಮೊಬೈಲ್ ಬಿಡಿಭಾಗಗಳ ಪ್ರೊಟೋಟೈಪ್‍ ಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಬೇಕು.

3. ಸ್ಕ್ರ್ಯಾಪೇಜ್ ನೀತಿಯನ್ನು ಜಾರಿಗೊಳಿಸಬೇಕೆಂಬುದು ಇನ್ನೊಂದು ಬೇಡಿಕೆ. ಇದು ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಸೃಷ್ಟಿಸದೆ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂಬುದು ಈ ಕ್ಷೇತ್ರದ ತಜ್ಞರ ಅಭಿಪ್ರಾಯ. ಮಾಲಿನ್ಯ ಸಮಸ್ಯೆ ಸೃಷ್ಟಿಸುವ ಹಳೆಯ ವಾಹನಗಳನ್ನು  ವಿಲೇವಾರಿ ಮಾಡಲು ಕೂಡ ಇಂತಹ ನೀತಿ ಸಹಕಾರಿಯಾಗಲಿದೆ.

4. ಇಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‍ಟಿ ಕಡಿಮೆಗೊಳಿಸಬೇಕು ಹಾಗೂ ಲೀಥಿಯಂ-ಐಯೋನ್ ಬ್ಯಾಟರಿ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಬೇಕು

5. ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲಿನ ಜಿಎಸ್‍ಟಿ ದರಗಳನ್ನು ಶೇ 5ಕ್ಕೆ ಇಳಿಸಬೇಕು. ದೆಶದಲ್ಲಿ  ಹೊಸ ಕಾರಿಗೆ ಇರುವ ಬೇಡಿಕೆಗಿಂತ ಸೆಕೆಂಡ್ ಹ್ಯಾಂಢ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ.

6.ಸರಕಾರದಿಂದ ಬರಬೇಕಿರುವ ಜಿಎಸ್‍ ಟಿ ರಿಫಂಡ್ ಅನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವಂತಾಗಬೇಕೆಂಬುದು ಇನ್ನೊಂದು ಆಗ್ರಹವಾಗಿದೆ.

7. ಐಸಿಇ ಬಸ್ಸುಗಳ ಖರೀದಿಗೆ ಬಜೆಟ್‍ ನಲ್ಲಿ ಅನುದಾನ ಮೀಸಲಿರಿಸಬೇಕು.

9.  ಸ್ವಂತ ಮಾಲಕತ್ವದ ಹಾಗೂ ಪಾಲುದಾರಿಕೆ ಸಂಸ್ಥೆಗಳ ಮೇಲಿನ ಕಾರ್ಪೊರೇಟ್ ತೆರಿಗೆ ಇಳಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News