ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

Update: 2020-01-30 15:02 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 30: ಮಾರಕ ಸಾರ್ಸ್‌ನಂಥ ವೈರಸ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಬುಧವಾರ ಎಲ್ಲ ದೇಶಗಳನ್ನು ಒತ್ತಾಯಿಸಿದೆ.

ಈ ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗವನ್ನು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂಬುದಾಗಿ ಘೋಷಿಸಬೇಕೇ ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಗುರುವಾರ ತುರ್ತು ಸಭೆಯನ್ನು ಕರೆದಿದೆ.

‘‘ಪ್ರತಿಯೊಂದು ದಿನದ ಪ್ರತಿ ಕ್ಷಣವೂ ಈ ಸಾಂಕ್ರಾಮಿಕ ರೋಗದ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ ಇಟ್ಟಿದೆ’’ ಎಂದು ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೆಬ್ರಯೇಸಸ್ ಜಿನೀವದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News