ಕಾನೂನಾದ ಬ್ರೆಕ್ಸಿಟ್: ಇಂದು ಮಧ್ಯರಾತ್ರಿ ವಿಚ್ಛೇದನ

Update: 2020-01-30 17:47 GMT

ಬ್ರಸೆಲ್ಸ್ (ಬೆಲ್ಜಿಯಮ್), ಜ. 30: ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ನ ನಿರ್ಗಮನ (ಬ್ರೆಕ್ಸಿಟ್)ವು ಬುಧವಾರ ಕಾನೂನಾಯಿತು. ಈ ಸಂಬಂಧದ ಕಾಗದಪತ್ರಗಳನ್ನು ಅನುಮೋದಿಸುವ ನಿರ್ಣಯದ ಪರವಾಗಿ ಐರೋಪ್ಯ ಒಕ್ಕೂಟದ ಸಂಸತ್ತು ಸಹಿ ಹಾಕಿತು.

ಅರ್ಧ ಶತಮಾನದ ಕೂಡು ಬಾಳುವಿಕೆ ಹಾಗೂ ಮೂರು ವರ್ಷಗಳ ಉದ್ವಿಗ್ನ ವಿಚ್ಛೇದನ ಮಾತುಕತೆಯ ಬಳಿಕ, ಅಂತಿಮವಾಗಿ ಶುಕ್ರವಾರ ಮಧ್ಯರಾತ್ರಿ (ಬ್ರಸೆಲ್ಸ್ ಸಮಯ) ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬೀಳಲಿದೆ.

ವಿಚ್ಛೇದನ ಒಪ್ಪಂದದ ಪರವಾಗಿ 621 ಮತಗಳು ಬಿದ್ದರೆ, ವಿರುದ್ಧವಾಗಿ 49 ಮತಗಳು ಬಿದ್ದವು. ಹಾಗಾಗಿ, ಐರೋಪ್ಯ ಒಕ್ಕೂಟದ ಸಂಸ್ಥೆಗಳಿಂದ ಬ್ರಿಟನ್ ಹೊರಹೋಗುತ್ತದೆ, ಆದರೆ, ವರ್ಷದ ಕೊನೆಯವರೆಗಿನ ಪರಿವರ್ತನಾ ಅವಧಿಯಲ್ಲಿ ಐರೋಪ್ಯ ಒಕ್ಕೂಟದ ಹೆಚ್ಚಿನ ನಿಯಮಗಳನ್ನು ಪಾಲಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News