‘ಪ್ರಯಾಣ ನಿಷೇಧ ದೇಶಗಳ’ ಪಟ್ಟಿಗೆ ಇನ್ನೂ 6 ದೇಶ ಸೇರಿಸಿದ ಟ್ರಂಪ್

Update: 2020-02-02 18:06 GMT

ವಾಶಿಂಗ್ಟನ್, ಫೆ. 2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ತನ್ನ ‘ಪ್ರಯಾಣ ನಿಷೇಧ ದೇಶಗಳ’ ಪಟ್ಟಿಯನ್ನು ವಿಸ್ತರಿಸಿದ್ದಾರೆ ಹಾಗೂ ಪಟ್ಟಿಗೆ ನೈಜೀರಿಯ ಮತ್ತು ಇತರ ಐದು ದೇಶಗಳನ್ನು ಸೇರಿಸಿದ್ದಾರೆ.

ಪ್ರಯಾಣ ನಿಷೇಧ ದೇಶಗಳ ಪಟ್ಟಿಯಲ್ಲಿರುವ ದೇಶಗಳಿಂದ ಜನರು ಅಮೆರಿಕಕ್ಕೆ ವಲಸೆ ಹೋಗುವುದನ್ನು ನಿಷೇಧಿಸಲಾಗಿದೆ.

ಪ್ರಯಾಣ ನಿಷೇಧ ದೇಶಗಳ ಪಟ್ಟಿಗೆ ಹೊಸದಾಗಿ ಸೇರಿಸಲ್ಪಟ್ಟಿರುವ ಆರು ದೇಶಗಳ ಪೈಕಿ ನಾಲ್ಕು ಆಫ್ರಿಕದ ದೇಶಗಳಾಗಿವೆ ಹಾಗೂ ಆ ಪೈಕಿ ಮೂರು ಮುಸ್ಲಿಮ್ ಬಾಹುಳ್ಯದ ದೇಶಗಳಾಗಿವೆ.

ಪ್ರಯಾಣ ನಿಷೇಧ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ದೇಶಗಳೆಂದರೆ ನೈಜೀರಿಯ, ಎರಿಟ್ರಿಯ, ಕಿರ್ಗಿಸ್ತಾನ್, ಮ್ಯಾನ್ಮಾರ್, ಸುಡಾನ್ ಮತ್ತು ತಾಂಝಾನಿಯ.

ಈ ಆರು ದೇಶಗಳು ಅಮೆರಿಕದ ಭದ್ರತೆ ಮತ್ತು ಮಾಹಿತಿ ಹಂಚಿಕೆ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ, ಹಾಗಾಗಿ, ಅವುಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಉಸ್ತುವಾರಿ ಆಂತರಿಕ ಭದ್ರತೆ ಕಾರ್ಯದರ್ಶಿ ಚಾಡ್ ವುಲ್ಫ್ ಹೇಳಿದರು.

ಕಳಪೆ ಪಾಸ್‌ಪೋರ್ಟ್ ತಂತ್ರಜ್ಞಾನದಿಂದ ಹಿಡಿದು ಭಯೋತ್ಪಾದನೆ ಶಂಕಿತರು ಮತ್ತು ಕ್ರಿಮಿನಲ್‌ಗಳ ಕುರಿತ ಸಾಕಷ್ಟು ಮಾಹಿತಿ ವಿನಿಮಯ ವೈಫಲ್ಯದವರೆಗಿನ ಹಲವು ಮಾನದಂಡಗಳನ್ನು ಪೂರೈಸುವಲ್ಲಿ ಈ ದೇಶಗಳು ವಿಫಲವಾಗಿವೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News