ಶೇ. 74 ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದ 105 ವರ್ಷದ ವೃದ್ಧೆ !

Update: 2020-02-06 15:47 GMT

ಕೊಲ್ಲಂ, ಫೆ. 5: ಕೇರಳದ ಅತಿ ಪ್ರಾಯದ ವಿದ್ಯಾರ್ಥಿನಿಯಾಗಿರುವ 105 ವರ್ಷದ ಭಾಗೀರಥಿ ಅಮ್ಮ 4ನೇ ತರಗತಿ ತತ್ಸಮಾನ ಪರೀಕ್ಷೆಯನ್ನು 74.5 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಕೇರಳ ರಾಜ್ಯ ಸಾಕ್ಷರ ಮಿಷನ್ (ಕೆಎಸ್‌ಎಲ್‌ಎಂ) ಬುಧವಾರ ಈ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದೆ. ಕೆಎಸ್‌ಎಲ್‌ಎಂನ ಜಿಲ್ಲಾ ಸಮನ್ವಯಾಧಿಕಾರಿ ಈ ಫಲಿತಾಶದ ಬಗ್ಗೆ ಮೊದಲಿಗೆ ಸಾಕ್ಷರತಾ ಕಾರ್ಯಕರ್ತ ಕೆ.ಬಿ. ವಸಂತಕುಮಾರ್ ಅವರಿಗೆ ಮಾಹಿತಿ ನೀಡಿದ್ದರು.

 ಅವರು ಭಾಗೀರಥಿ ಅಮ್ಮ ಅವರಿಗೆ ತಿಳಿಸಿದ್ದರು. ‘‘ಅವರು ಫಲಿತಾಂಶ ಕೇಳಿ ಸಂತಸಗೊಂಡರು. ಪ್ರಾಯ ಸಂಬಂಧಿ ಕಾರಣದಿಂದ ಅವರ ಕೆಲವು ದಿನಗಳ ಹಿಂದೆ ಊರುಗೋಲು ಅವಲಂಬಿಸಿದ್ದರು. ಫಲಿತಾಂಶಕ್ಕಾಗಿ ನಿರೀಕ್ಷಿಸುತ್ತಿದ್ದರು” ಎಂದು ವಸಂತಕುಮಾರ್ ತಿಳಿಸಿದ್ದಾರೆ.

‘‘ನಾನು ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುವುದು ಕೇಳಿ ಸಂತಸವಾಯಿತು. ಆರೋಗ್ಯ ಸರಿಯಾಗಿದ್ದರೆ ಮುಂದಿನ ತರಗತಿ ಪರೀಕ್ಷೆಗೆ ಕುಳಿತುಕೊಳ್ಳಬೇಕೆಂಬ ಆಸೆ ಇದೆ’’ ಎಂದು ಭಾಗೀರತಿ ಹೇಳಿದ್ದಾರೆ. ಈಗ ಭಾಗೀರಥಿ ಅಮ್ಮ ಶಿಕ್ಷಣ ಮುಂದುವರಿಸುವ ಮಹಿಳೆಯರಿಗೆ ಪ್ರೇರಣೆ ನೀಡಲು ಕೆಎಸ್‌ಎಲ್‌ಎಂನ ರಾಯಭಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News