ಅದ್ದೂರಿಯಾಗಿ ನೆರವೇರಿದ ನಿಖಿಲ್ ಕುಮಾರಸ್ವಾಮಿಯ ವಿವಾಹ ನಿಶ್ಚಿತಾರ್ಥ

Update: 2020-02-10 07:56 GMT

ಬೆಂಗಳೂರು, ಫೆ.10 ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ದಂಪತಿಯ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ನಿಶ್ಚಿತಾರ್ಥವು ಇಂದು ಖಾಸಗಿ ಹೊಟೇಲ್‍ನಲ್ಲಿ ಅದ್ದೂರಿಯಾಗಿ ನೆರವೇರಿತು.

ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್‍ ವಿವಾಹದ ನಿಶ್ಚಿತಾರ್ಥವು ಎರಡೂ ಕುಟುಂಬಗಳ ಬಂಧು-ಬಳಗ ಹಾಗೂ ಹಿರಿಯರ ಸಮ್ಮುಖದಲ್ಲಿ ನೆರವೇರಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮುಖಂಡರು, ಚಲನಚಿತ್ರರಂಗದ ಗಣ್ಯರು, ಉಭಯ ಕುಟುಂಬಗಳ ಬಂಧುಗಳು, ಹಿತೈಷಿಗಳು ನಿಶ್ಚಿತಾರ್ಥಕ್ಕೆ ಆಗಮಿಸಿ ನಿಖಿಲ್ ಹಾಗೂ ರೇವತಿ ಅವರಿಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News