8 ತಿಂಗಳುಗಳ ಕಾಲ ಕೆಂಪೇಗೌಡ ವಿಮಾನ ನಿಲ್ದಾಣದ ಮೊದಲನೇ ರನ್‌ವೇ ಸ್ಥಗಿತ

Update: 2020-02-11 18:34 GMT

ಬೆಂಗಳೂರು, ಫೆ.11: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲನೇ ರನ್‌ವೇ ಅಭಿವೃದ್ಧಿ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಾ.26 ರಿಂದ ಎಂಟು ತಿಂಗಳುಗಳ ಕಾಲ ಅದರ ಬಳಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣ 2008 ರಲ್ಲಿ ಕಾರ್ಯಾರಂಭ ಮಾಡಿದ್ದು, ಅಂದಿನಿಂದಲೂ ಇದೇ ರನ್‌ವೇ ಬಳಸಲಾಗುತ್ತಿದೆ. 2018 ರ ಡಿಸೆಂಬರ್‌ನಲ್ಲಿ ಎರಡನೇ ರನ್‌ವೇ ಬಳಕೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲನೇ ರನ್‌ವೇ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.

ಸಿಎಟಿ 1 ನಿಂದ ಸಿಎಟಿ 3 ರ ಲ್ಯಾಂಡಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ನ.4 ರವರೆಗೆ ಕಾಮಗಾರಿ ನಡೆಯಲಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News