ಭಾರತದ ಆರ್ಥಿಕತೆ ನಿರೀಕ್ಷೆಗಿಂತ ದುರ್ಬಲ: ಐಎಂಎಫ್

Update: 2020-02-14 03:46 GMT

ಹೊಸದಿಲ್ಲಿ: ಭಾರತದ ಆರ್ಥಿಕತೆ ನಿರೀಕ್ಷೆಗಿಂತ ದುರ್ಬಲವಾಗಿದ್ದು, ತುರ್ತಾಗಿ ಮಹತ್ವಾಕಾಂಕ್ಷಿ ರಾಚನಿಕ ಮತ್ತು ಹಣಕಾಸು ವಲಯದಲ್ಲಿ ಸುಧಾರಣೆಗಳು ಆಗಬೇಕಿವೆ ಎಂದು ಅಂತರ್ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಲಹೆ ನೀಡಿದೆ.

ಹೆಚ್ಚುತ್ತಿರುವ ಸಾಲದ ಮಟ್ಟ ನಿಯಂತ್ರಿಸುವ ಸಲುವಾಗಿ ಮಧ್ಯಮಾವಧಿ ವಿತ್ತೀಯ ಕ್ರೋಢೀಕರಣ ತಂತ್ರಗಾರಿಕೆಯನ್ನೂ ಅನುಸರಿಸುವುದು ಸೂಕ್ತ. ಜತೆಗೆ ಬಜೆಟ್‌ನಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಯ ವಿತ್ತೀಯ ನಿಲುವು ಅಗತ್ಯ ಎಂದೂ ಪ್ರತಿಪಾದಿಸಿದೆ.

ಕೇಂದ್ರ ಬಜೆಟ್ ಬಗೆಗೆ ಕೇಳಿದ ಪ್ರಶ್ನೆಗೆ ಐಎಂಎಫ್ ವಕ್ತಾರ ಗೆರ್ರಿ ರೈಸ್, "ಐಎಂಎಫ್ ಅಂದಾಜಿಸಿದ್ದಕ್ಕಿಂತ ಭಾರತತದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದೆ" ಎಂದು ಅಭಿಪ್ರಾಯಪಟ್ಟರು.

"ಬಜೆಟ್ ವಿಭಾಗೀಯ ಪ್ರಯತ್ನಗಳಿಗೆ ಸ್ಪರ್ಶ ನೀಡಿದ್ದರೂ, ಮಹತ್ವಾಕಾಂಕ್ಷಿ ರಾಚನಿಕ ಹಾಗೂ ವಿತ್ತೀಯ ಸುಧಾರಣಾ ಕ್ರಮಗಳು ಅನಿವಾರ್ಯ. ಹೆಚ್ಚುತ್ತಿರುವ ಸಾಲದ ಹಿನ್ನೆಲೆಯಲ್ಲಿ ಪ್ರಬಲವಾದ, ಮೇಲ್ನೋಟಕ್ಕೆ ಗೋಚರವಾಗುವ ಆದಾಯ ಮತ್ತು ವೆಚ್ಚ ಕ್ರಮಗಳನ್ನೊಳಗೊಂಡ ಮಧ್ಯಮಾವಧಿಯ ವಿತ್ತೀಯ ಕ್ರೋಢೀಕರಣ ಕಾರ್ಯತಂತ್ರ ಅಗತ್ಯ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News