ಪುಲ್ವಾಮ ದಾಳಿಯಿಂದ ಯಾರು ಪ್ರಯೋಜನ ಪಡೆದರು, ದಾಳಿಗೆ ಯಾರು ಹೊಣೆಗಾರರು ?

Update: 2020-02-14 05:52 GMT

ಹೊಸದಿಲ್ಲಿ, ಫೆ.14: ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದು ಫೆ.14ಕ್ಕೆ ಒಂದು ವರ್ಷವಾಗುತ್ತಿದೆ.  ಭಾರತದ ಪಾಲಿಗೆ ಇಂದು  ಕರಾಳ ದಿನ.  ಭಾರತವು ಪುಲ್ವಾಮ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಕರಣದ   ತನಿಖೆಯ ಬಗ್ಗೆ ಕೇಂದ್ರ ಸರಕಾರಕ್ಕೆ ಮೂರು ಪ್ರಶ್ನೆಗಳನ್ನು ಎತ್ತಿದ್ದಾರೆ.  ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ  ವಾಗ್ದಾಳಿ ನಡೆಸಿದ್ದಾರೆ.

 2019  ಫೆಬ್ರವರಿ 14ರಂದು  ಪುಲ್ವಾಮದಲ್ಲಿ  ಪಾಕಿಸ್ತಾನ ಬೆಂಬಲಿತ ಜೈಶ್-ಎ-ಮೊಹಮ್ಮದ್  ಉಗ್ರರು ನಡೆಸಿದ  ಆತ್ಮಾಹುತಿ ಬಾಂಬ್ ದಾಳಿಯಲ್ಲಿ  40 ಸಿ ಆರ್ ಎಫ್  ಯೋಧರು ಹುತಾತ್ಮರಾಗಿದ್ದರು.

ರಾಹುಲ್ ಗಾಂಧಿ  ಟ್ವಿಟರ್ ನಲ್ಲಿ ಸರಕಾರದ ಮುಂದಿಟ್ಟಿರುವ   ಪ್ರಶ್ನೆಗಳು ಇಂತಿವೆ

1. ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು?

2. ದಾಳಿಯ ತನಿಖೆಯ  ಫಲಿತಾಂಶ ಏನು?

3. ದಾಳಿಗೆ ಅವಕಾಶ ನೀಡಿದ ಭದ್ರತಾ ಕೊರತೆಗಳಿಗೆ ಬಿಜೆಪಿ ಸರಕಾರದಲ್ಲಿ ಇನ್ನೂ ಯಾರು ಹೊಣೆಗಾರರಾಗಿದ್ದಾರೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News