ಕನ್ನಡ ಮಾತನಾಡಿದರೆ ದಂಡ: ಎಸ್‌ಎಲ್‌ಎಸ್ ಗುರುಕುಲ ಶಾಲೆಯ ಮಾನ್ಯತೆ ರದ್ದತಿಗೆ ಮನವಿ

Update: 2020-02-15 18:39 GMT

ಬೆಂಗಳೂರು, ಫೆ.15: ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಕನ್ನಡ ಮಾತನಾಡಿದರೆ ದಂಡ ವಿಧಿಸುವಂತೆ ಪೋಷಕರಿಗೆ ಪತ್ರ ಕಳಿಸಿರುವ ಬೆಂಗಳೂರಿನ ಚೆನ್ನಸಂದ್ರದಲ್ಲಿರುವ ಎಸ್‌ಎಲ್‌ಎಸ್ ಅಂತರ್‌ರಾಷ್ಟ್ರೀಯ ಗುರುಕುಲ ಶಾಲೆಯ ಮಾನ್ಯತೆ ರದ್ದು ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಒತ್ತಾಯಿಸಿದ್ದಾರೆ.

ಈ ಪ್ರಕರಣವು ಶಿಕ್ಷಣ ಹಕ್ಕು ಕಾಯ್ದೆ 2019, ಶಿಕ್ಷಣ ಹಕ್ಕು ನಿಯಮಗಳು 2012, ಕನ್ನಡ ಕಲಿಕಾ ಅಧಿನಿಯಮ 2015 ಮತ್ತು ಕನ್ನಡ ಕಲಿಕಾ ನಿಯಮಗಳು 2017 ಗಳನ್ನು ಪೂರ್ಣವಾಗಿ ಉಲಂಘಿಸಲಾಗಿರುವುದರಿಂದ ಸದರಿ ಶಾಲೆಯ ಮಾನ್ಯತೆಯನ್ನು ನಿಯಮಾನುಸಾರ ರದ್ದುಗೊಳಿಸುವಂತೆ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ಗೆ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್ ಸೂಚಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News