ಬಂಗಾಳದ ನಟ-ರಾಜಕಾರಿಣಿ ತಪಾಸ್ ಪಾಲ್ ನಿಧನ

Update: 2020-02-18 06:53 GMT

 ಕೋಲ್ಕತಾ, ಫೆ.18: ಹಿರಿಯ ಬಂಗಾಳಿ ನಟ ಹಾಗೂ ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದ ತಪಾಸ್ ಪಾಲ್ ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ಪಾಲ್ ಕುಟುಂಬ ಮೂಲಗಳು ತಿಳಿಸಿವೆ. ಪಾಲ್‌ಗೆ 61 ವರ್ಷ ವಯಸ್ಸಾಗಿತ್ತು.

ತನ್ನ ಮಗಳನ್ನು ಭೇಟಿಯಾಗಲು ಮುಂಬೈಗೆ ತೆರಳಿದ್ದ ಪಾಲ್ ಕೋಲ್ಕತಾಕ್ಕೆ ವಾಪಸಾಗಲು ಮುಂಬೈ ಏರ್‌ಪೋರ್ಟ್‌ಗೆ ಬಂದಿದ್ದಾಗ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಜುಹುವಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಅವರು ಬೆಳಗ್ಗೆ 4 ಗಂಟೆಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪಾಲ್‌ಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿತ್ತು. ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಪಾಲ್ ಕೃಷ್ಣನಗರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅಲಿಪೊರ್‌ನಲ್ಲಿ ಶಾಸಕರಾಗಿಯೂ ಪ್ರತಿನಿಧಿಸಿದ್ದರು. ಮೃತರು ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಹೂಗ್ಲಿ ಜಿಲ್ಲೆಯ ಚಂದನ್‌ನಗರದಲ್ಲಿ ಜನಿಸಿದ್ದ ಪಾಲ್ ಹೂಗ್ಲಿ ಮೊಹ್ಸಿನ್ ಕಾಲೇಜಿನಲ್ಲಿ ಬಯೋ ಸೈನ್ಸ್ ನಲ್ಲಿ ಪದವಿ ಪಡೆದಿದ್ದರು. ತಪಾಸ್ ಪಾಲ್ ಚಿತ್ರರಂಗದಿಂದ ರಾಜಕೀಯ ರಂಗ ಪ್ರವೇಶಿಸಿದ್ದರು. ಪಾಲ್ ನಿಧನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News