ಎಜಿಆರ್ ಟೆಲಿಕಾಂ ಉದ್ಯಮದ ಪಾಲಿಗೆ ಅಭೂತಪೂರ್ವ ಬಿಕ್ಕಟ್ಟು: ಭಾರ್ತಿ ಏರ್‌ಟೆಲ್‌ನ ಸ್ಥಾಪಕ ಮಿತ್ತಲ್

Update: 2020-02-20 17:29 GMT

ಹೊಸದಿಲ್ಲಿ, ಫೆ.20: ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ವಿಷಯವು ದೂರಸಂಪರ್ಕ ಉದ್ಯಮದ ಪಾಲಿಗೆ ಅಭೂತಪೂರ್ವ ಬಿಕ್ಕಟ್ಟು ಆಗಿದೆ ಎಂದು ಭಾರ್ತಿ ಏರ್‌ಟೆಲ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಸುನಿಲ ಭಾರ್ತಿ ಮಿತ್ತಲ್ ಅವರು ಗುರುವಾರ ಇಲ್ಲಿ ತಿಳಿಸಿದರು.

ಟೆಲಿಕಾಂ ರಂಗದ ಒಟ್ಟಾರೆ ಚಿತ್ರಣವನ್ನು ನೀಡಲು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಜಿಆರ್ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲು ಬದ್ಧವಾಗಿದ್ದು,ಭಾರ್ತಿ ಏರ್‌ಟೆಲ್ ಬಾಕಿ ಹಣವನ್ನು ತ್ವರಿತವಾಗಿ ಪಾವತಿಸಲಿದೆ ಎಂದರು.

ತನ್ನ ಹಿಂದಿನ ಆದೇಶವನ್ನು ಪಾಲಿಸದ್ದಕ್ಕಾಗಿ ಟೆಲಿಕಾಂ ಕಂಪನಿಗಳು ಮತ್ತು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ಬೆದರಿಕೆಯೊಡ್ಡಿದ ಬಳಿಕ ಸರಕಾರವು ಕೋಟ್ಯಂತರ ರೂ.ಗಳ ಎಜಿಆರ್ ಬಾಕಿಯನ್ನು ತಕ್ಷಣ ಪಾವತಿಸುವಂತೆ ಈ ಮೊಬೈಲ್ ಸೇವಾ ಕಂಪನಿಗಳಿಗೆ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News