ಮುಟ್ಟು ಪರಿಶೀಲಿಸಲು ಒಳ ಉಡುಪು ತೆಗೆಸಿದ ಕಾಲೇಜು: ಹೊಸದಿಲ್ಲಿಯಲ್ಲಿ ‘ಋತುಚಕ್ರ ಉತ್ಸವ’ ಆಯೋಜಿಸಿ ಪ್ರತಿಭಟನೆ

Update: 2020-02-24 18:04 GMT

ಹೊಸದಿಲ್ಲಿ, ಫೆ. 24: ಅಡುಗೆ ಮನೆಯ ಮುಟ್ಟಿನ ಕಳಂಕವನ್ನು ಅಂತ್ಯಗೊಳಿಸಲು ದಿಲ್ಲಿ ಮೂಲದ ಸರಕಾರೇತರ ಸಂಸ್ಥೆ ಸಚ್ಚಿ ಸಹೇಲಿ ‘ಋತುಚಕ್ರ ಉತ್ಸವ’ವನ್ನು ಹೊಸದಿಲ್ಲಿಯ ಮಯೂರ್ ವಿಹಾರದ ಸೆಂಟ್ರಲ್ ಪಾರ್ಕ್‌ನಲ್ಲಿ ಫೆಬ್ರವರಿ 23ರಂದು ಆಯೋಜಿಸಿತ್ತು.

ಈ ಉತ್ಸವದಲ್ಲಿ 28 ಮಂದಿ ಮುಟ್ಟಾದ ಮಹಿಳೆಯರು ಆಹಾರ ತಯಾರಿಸಿ 300 ಮಂದಿಗೆ ಬಡಿಸಿದ್ದಾರೆ. ಭುಜ್‌ನಲ್ಲಿರುವ ಶ್ರೀ ಸಹಜಾನಂದ ಗರ್ಲ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಮುಟ್ಟಾದ ಇಬ್ಬರು ಯುವತಿಯರು ಅಡುಗೆ ಕೋಣೆಗೆ ಪ್ರವೇಶಿಸಿದ್ದಾರೆ ಎಂದು ಹಾಸ್ಟೆಲ್ ವಾರ್ಡನ್ ದೂರು ನೀಡಿದ ಬಳಿಕ ಮುಟ್ಟಾಗಿಲ್ಲವೆಂದು ಸಾಬೀತುಪಡಿಸಲು 68 ಯುವತಿಯ ಒಳಉಡುಪು ತೆಗೆಸಿದ ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಕೃಷ್ಣ ಸ್ವರೂಪ್ ದಾಸ್ ಜಿ (ಇವರ ಅನುಯಾಯಿಗಳು ಈ ಶಾಲೆ ನಡೆಸುತ್ತಿದ್ದಾರೆ) ಮುಟ್ಟಾದ ಮಹಿಳೆ ತನ್ನ ಗಂಡನಿಗಾಗಿ ಆಹಾರ ತಯಾರಿಸಿದರೆ, ಆಕೆ ಮುಂದಿನ ಜನ್ಮದಲ್ಲಿ ಖಂಡಿತವಾಗಿಯೂ ಹೆಣ್ಣು ನಾಯಿಯಾಗಿ ಜನಿಸುತ್ತಾಳೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಚ್ಚಿ ಸಹೇಲಿ ಈ ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆಯೋರ್ವರು, ‘‘ಮಹಿಳೆಯ ಮುಟ್ಟಿನ ಬಗ್ಗೆ ನನಗೆ ಹೆಮ್ಮೆ ಇದೆ’’ ಎಂದಿದ್ದಾರೆ. ಇದಲ್ಲದೆ, ಈ ಕಾರ್ಯಕ್ರಮದಲ್ಲಿ ಮುಟ್ಟಿನ ಮೂಢನಂಬಿಕೆಯ ಬಗ್ಗೆ ಬೀದಿ ನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಇಂದಿನ ವೈಜ್ಞಾನಿಕ ಯುಗದಲ್ಲಿ ಮುಟ್ಟಿನ ಬಗ್ಗೆ ಶುದ್ಧ ಹಾಗೂ ಅಶುದ್ಧ ಎಂಬ ಕಲ್ಪನೆ ಇಲ್ಲ. ಇದು ತನ್ನಷ್ಟಕ್ಕೇ ಆಗುವ ದೈಹಿಕ ಪ್ರಕ್ರಿಯೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News