ಅಹ್ಮದಾಬಾದ್‌ನಲ್ಲಿ ನಮಸ್ತೆ, ದಿಲ್ಲಿಯಲ್ಲಿ ಬೆಂಕಿ: ಕೇಂದ್ರದ ವಿರುದ್ಧ ಶಿವಸೇನೆ ವಾಗ್ದಾಳಿ

Update: 2020-02-26 10:39 GMT

ಮುಂಬೈ, ಫೆ.26: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಧಾನಿಗೆ ಭೇಟಿ ನೀಡುತ್ತಿರುವಾಗ ದಿಲ್ಲಿಯಲ್ಲಿ ಗಲಭೆಗಳು ನಿರಂತರವಾಗಿ ಮುಂದುವರೆದಿದೆ ಮತ್ತು  ಇದು ದೇಶದ ಹಿತದೃಷ್ಠಿಯಿಂದ  ಉತ್ತಮವಾಗಿ ಕಾಣುತ್ತಿಲ್ಲ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ  ಹೇಳಿದೆ.

ದಿಲ್ಲಿಯನ್ನು ನಡುಗಿಸಿದ ಹಿಂಸಾಚಾರದ ಬಗ್ಗೆ ಶಿವಸೇನೆ ಮತ್ತೊಮ್ಮೆ ಕೇಂದ್ರ ಮತ್ತು ಕೇಂದ್ರ ಗೃಹ ಸಚಿವಾಲಯ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ. ಹಿಂಸಾಚಾರದ ಪರಿಣಾಮವಾಗಿ ಇದುವರೆಗೆ 18 ಜನರು ಸಾವನ್ನಪ್ಪಿದ್ದಾರೆ ಮತ್ತು ಸ್ಥಳೀಯರ ಅಂಗಡಿ  ಮನೆಗಳು ಮತ್ತು ಆಸ್ತಿಪಾಸ್ತಿಗಳಿಗೆ ಭಾರಿ ಹಾನಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಧಾನಿಗೆ ಭೇಟಿ ನೀಡುತ್ತಿರುವಾಗ ದಿಲ್ಲಿಯಲ್ಲಿ ಗಲಭೆಗಳು ನಿರಂತರವಾಗಿ ಮುಂದುವರೆದಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ  ಹೇಳಿದೆ.

"ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸುತ್ತಿದ್ದಾಗ ದೆಹಲಿ ಉರಿಯುತ್ತಿತ್ತು. ಯಾವುದೇ ಕಾರಣವಿರಬಹುದು ಆದರೆ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ" ಎಂದು ಶಿವಸೇನೆ ಹೇಳಿದರು.

"1984 ರ ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ, ಬಿಜೆಪಿ ಇನ್ನೂ ಕಾಂಗ್ರೆಸ್ ಅನ್ನು ದೂಷಿಸುತ್ತಿದೆ. ಇಂದಿರಾ ಗಾಂಧಿಯವರ ಹತ್ಯೆಯ ನಂತರ, ಸಿಖ್ ಸಮುದಾಯವನ್ನು ದಿಲ್ಲಿಯಲ್ಲಿ ಗುರಿಯಾಗಿಸಲಾಯಿತು ಮತ್ತು ನೂರಾರು ಸಿಖ್ ಸಹೋದರರನ್ನು ಕೊಲ್ಲಲಾಯಿತು" ಎಂದು ಸಂಪಾದಕೀಯವು ಹೇಳಿದೆ. ಶಿವಸೇನೆಯ ಸಂಜಯ್ ರಾವತ್ ಸಾಮ್ನಾದ ಸಂಪಾದಕರಾಗಿದ್ದಾರೆ. 

"ದಿಲ್ಲಿಯಲ್ಲಿ ಇದೀಗ ಇದೇ ರೀತಿಯ ಹಿಂಸಾಚಾರ ನಡೆಯುತ್ತಿದೆ ಮತ್ತು ಜನರು ಕತ್ತಿ ಮತ್ತು ರಿವಾಲ್ವರ್‌ಗಳೊಂದಿಗೆ ಬೀದಿಗಿಳಿದಿದ್ದಾರೆ. ನಾವು ನೋಡುತ್ತಿರುವ ದಿಲ್ಲಿಯ ದೃಶ್ಯಗಳು ಭಯಾನಕವಾಗಿವೆ. ಇದಕ್ಕೆ ಯಾರು ಕಾರಣ?  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಧಾನಿಯಲ್ಲಿವಾಗ  ಅದು ನಮಗೆ ಚೆನ್ನಾಗಿ ಕಾಣುತ್ತಿಲ್ಲ "ಎಂದು ಸಾಮ್ನಾ ಸಂಪಾದಕೀಯದಲ್ಲಿ ಹೇಳಲಾಗಿದೆ.

"ಭಯೋತ್ಪಾದನೆಯನ್ನು ಕೊನೆಗೊಳಿಸುವಂತೆ ಟ್ರಂಪ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ವಿರುದ್ಧ ಹೋರಾಡಲು ಟ್ರಂಪ್ ಭಾರತಕ್ಕೆ ವಿನಾಶಕಾರಿ ಕ್ಷಿಪಣಿಗಳನ್ನು ತಲುಪಿಸಲಿದ್ದಾರೆ ಆದರೆ ಇದು ಅಂತಿಮವಾಗಿ ಒಂದು ವ್ಯಾಪಾರವಾಗಿದೆ ಮತ್ತು ಅದಕ್ಕಾಗಿ ನಾವು ಶತಕೋಟಿ ಡಾಲರ್  ಗಳನ್ನು ಪಾವತಿಸಬೇಕಾಗಿದೆ. ಟ್ರಂಪ್ ಮೋದಿಯನ್ನು ಕನಿಷ್ಠ 25 ಬಾರಿ ಹೊಗಳಿದರು ಮತ್ತು ತಬ್ಬಿಕೊಂಡರು ಪರಸ್ಪರ 25 ಅಪ್ಪುಗೆಗಳಿಂದ  ನಮಗೆ 3 ಬಿಲಿಯನ್ ಡಾಲರ್  ವೆಚ್ಚವಾಗುತ್ತವೆ "ಎಂದು ಶಿವಸೇನೆ ಹೇಳಿದೆ

"ನಮ್ಮಲ್ಲಿ ಎಲ್ಲಾ ವ್ಯವಸ್ಥೆ ಇದ್ದರೂ  ದಿಲ್ಲಿ ಗಲಭೆಗಳನ್ನು ಏಕೆ ತಡೆಯಲಾಗಲಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಬಹಳ ಧೈರ್ಯದಿಂದ 370 ಮತ್ತು 35 ಎ ವಿಧಿಗಳನ್ನು ತೆಗೆದುಹಾಕಲಾಗಿದೆ ಮತ್ತು ದಿಲ್ಲಿ ಗಲಭೆಗಳನ್ನು ತಡೆಯಲು ಅದೇ ಧೈರ್ಯವನ್ನು ತೋರಿಸಬೇಕಾಗಿತ್ತು" ಎಂದು ಸಾಮ್ನ  ಸಂಪಾದಕೀಯವು ಕೇಂದ್ರವನ್ನು ದೂಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News