ಹಣಕ್ಕಾಗಿ ಬ್ಯಾಂಕ್, ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಆರೋಪ: ಮೂವರ ಬಂಧನ

Update: 2020-02-26 15:13 GMT

ಬೆಂಗಳೂರು, ಫೆ.26: ಬ್ಯಾಂಕ್ ಮತ್ತು ಸರಕಾರಿ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹಣಕ್ಕೆ ಬೆದರಿಕೆ ಹಾಕಿದ ಆರೋಪದಡಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಣಿಪುರ ಮೂಲದ ಸಾರಾಂಗ್‌ದೆಮ್ ಗೈನೇಶ್ವರ್ ಸಿಂಗ್(45), ಲೈರೆನ್ ಲಾಪಮ್ ಮನಿಹಾರ್ ಸಿಂಗ್(47) ಹಾಗೂ ತಂಗ್‌ಕಿಶೋರ್ ಸಿನ್ಹಾ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರ ಮೂಲದ ಆರೋಪಿಗಳು ಕಂಗಲೇಪಿಕ್ ಕಮ್ಯೂನಿಸ್ಟ್ ಪಾರ್ಟಿಯ ಫೈನಾನ್ಸ್ ಸೆಕರೇಟರಿ ಫಾರಿ ಮೇಥಿ ಹೆಸರಿನಲ್ಲಿ ಮಣಿಪುರದ ಬ್ಯಾಂಕ್ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಹಣ ಕೊಡುವಂತೆ ಬೆದರಿಕೆ ಪತ್ರ ಕಳುಹಿಸಿ ಮೊಬೈಲ್ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ನಗರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News