ಬಸ್ ಪ್ರಯಾಣ ದರ ಏರಿಕೆಗೆ ಎಸ್‌ಯುಸಿಐ ಖಂಡನೆ

Update: 2020-02-26 17:14 GMT

ಬೆಂಗಳೂರು, ಫೆ. 26: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಹಾಲು ಸೇರಿದಂತೆ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಮೇಲೆ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರವನ್ನು ಶೇ.12ರಷ್ಟು ಏರಿಕೆ ಮಾಡಿರುವುದು ಸಲ್ಲ. ದರ ಏರಿಕೆ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕೆಂದು ಎಸ್‌ಯುಸಿಐ ರಾಜ್ಯ ಕಾರ್ಯದರ್ಶಿ ಕೆ. ಉಮಾ ಆಗ್ರಹಿಸಿದ್ದಾರೆ.

ಎರಡು ವರ್ಷಗಳ ಸತತ ಪ್ರವಾಹದಿಂದ ಸಂತ್ರಸ್ತರಾದ ರಾಜ್ಯದ ಜನತೆ ಚೇತರಿಸಿಕೊಂಡಿಲ್ಲ. ದೇಶದಲ್ಲಿ ಹರಡುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಉದ್ಯೋಗ ನಾಶಗಳು ಜನರ ಆದಾಯವನ್ನು ಕುಂಠಿತಗೊಳಿಸಿವೆ. ಕೆಎಸ್ಸಾರ್ಟಿಸಿಯಂತಹ ಸಾರ್ವಜನಿಕ ಸಾರಿಗೆಯನ್ನು ಬಳಸುವವರು ಬಹುತೇಕ ಬಡವರು, ದುಡಿಯುವ ಜನಗಳೇ ಆಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ನೆರವಾಗಬೇಕಾದ ಒಂದು ಪ್ರಜಾಪ್ರಭುತ್ವ ಸರಕಾರವು ಈ ರೀತಿ ಇನ್ನಷ್ಟು ಬೆಲೆ ಏರಿಕೆಯ ಬರೆ ಎಳೆಯುವುದು ಅಮಾನವೀಯ ಕ್ರಮ. ಆದುದರಿಂದ ಸರಕಾರ ಇಲಾಖೆಯಲ್ಲಿರುವ ಭ್ರಷ್ಟಾಚಾರ, ದುಂದು ವೆಚ್ಚ ನಿಯಂತ್ರಿಸದಿದ್ದರೆ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News