"ಮಹಿಳಾ ಗಾರ್ಮೆಂಟ್ಸ್ ನೌಕರರಿಗೆ 100 ರೂ.ಗೆ ತಿಂಗಳ ಪಾಸ್"

Update: 2020-02-26 17:19 GMT

ಬೆಂಗಳೂರು, ಫೆ.26: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಹಿಳೆಯರ ಸುರಕ್ಷಿತ ಪ್ರಯಾಣ ಹಾಗೂ ಸಮೂಹ ಸಾರಿಗೆಗೆ ಉತ್ತೇಜನ ನೀಡುವ ಸಲುವಾಗಿ, ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಅತೀ ಕಡಿಮೆ ದರದಲ್ಲಿ ಮಾಸಿಕ ಪಾಸ್ ನೀಡಲು ಮುಂದಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೆಶಕಿ ಸಿ.ಶಿಖಾ, ಸದ್ಯ ಬಿಎಂಟಿಸಿ ಮಾಸಿಕ ಪಾಸ್ ದರ 1,050 ರೂ. ಇದೆ. ಗಾರ್ಮೆಂಟ್ಸ್‌ನಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ 100 ರೂ.ಗೆ ತಿಂಗಳ ಪಾಸ್ ನೀಡುವ ಸಂಬಂಧ ಈಗಾಗಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಸರಕಾರ ಕೂಡ ಬಹುತೇಕ ಅಸ್ತು ಅನ್ನುವ ಸಾಧ್ಯೆತೆಯಿದ್ದು, ಈ ಬಾರಿಯ ಬಜೆಟ್‌ನಲ್ಲಿ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಈ ಹೊಸ ಯೋಜನೆ ಅನ್ವಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ 100 ರೂ.ಗೆ ತಿಂಗಳ ಪಾಸ್ ಸಿಗಲಿದೆ. ಪಾಸ್‌ನ ಉಳಿದ ಮೊತ್ತವನ್ನು ಬಿಎಂಟಿಸಿ, ಕಾರ್ಮಿಕ ಇಲಾಖೆ, ಗಾರ್ಮೆಂಟ್ಸ್ ಮಾಲಕರು ಭರಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News