ದಿಲ್ಲಿ ಹಿಂಸಾಚಾರ: ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆ

Update: 2020-02-27 13:32 GMT

ಹೊಸದಿಲ್ಲಿ, ಫೆ.28: ದಿಲ್ಲಿಯ  ಕೆಲವು ಭಾಗಗಳನ್ನು ಮೂರು ದಿನಗಳಿಂದ ನಡುಗಿಸಿರುವ ಹಿಂಸಾಚಾರದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರಕ್ಕೆ  32 ಕ್ಕೆ ಏರಿದೆ. 200ಕ್ಕೂ ಅಧಿಕ ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಲಭೆ ಪೀಡಿತ ಈಶಾನ್ಯ ದಿಲ್ಲಿಯ  ಕೆಲವು ಭಾಗಗಳಲ್ಲಿ ನಿಶ್ಯಬ್ದವಾಗಿದ್ದರೆ, ಇತರ ಕೆಲವು ಸ್ಥಳಗಳಿಂದ ಹಿಂಸಾಚಾರ  ನಡೆದಿರುವ ಬಗ್ಗೆ ವರದಿಯಾಗಿದೆ, ಅಂಗಡಿಗಳಿಗೆ  ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಚಾಂದ್ ಬಾಗ್‌ನ ಚರಂಡಿಯಲ್ಲಿ ಗುಪ್ತಚರ ಬ್ಯೂರೋ (ಐಬಿ) ಸಿಬ್ಬಂದಿಯೊಬ್ಬರ  ಮೃತದೇಹ ಪತ್ತೆಯಾಗಿದೆ.

ಹಿಂಸಾಚಾರಕ್ಕೆ ಸಂಬಂಧಿಸಿ  106 ಜನರನ್ನು ಬಂಧಿಸಲಾಗಿದೆ ಮತ್ತು 18 ಎಫ್ ಐಆರ್ ದಾಖಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News