'ವಾರ್ತಾ ಭಾರತಿ'ಯ ಇಮ್ತಿಯಾಝ್ ಶಾ ಸೇರಿ 47 ಪತ್ರಕರ್ತರಿಗೆ ರಾಜ್ಯ ಪ್ರಶಸ್ತಿ

Update: 2020-03-03 15:52 GMT

ಬೆಂಗಳೂರು, ಮಾ.3: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಜೀವಮಾನದ ವೃತ್ತಿ ಸೇವೆ, ಸಾಧನೆ ಮತ್ತು ಅತ್ಯುತ್ತಮ ವರದಿ(ಲೇಖನ)ಗಳಿಗಾಗಿ ಪತ್ರಕರ್ತರಿಗೆ ನೀಡುವ 2018ನೆ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕೆ.ಎನ್.ಸುಬ್ರಮಣ್ಯ ಪ್ರಶಸ್ತಿಗೆ ದಿ ಹಿಂದೂ ಬ್ಯೂರೋ ಉಪ ಮುಖ್ಯಸ್ಥ ಬಿ.ಎಂ.ಸತೀಶ್‌ ಕುಮಾರ್ ಆಯ್ಕೆಯಾಗಿದ್ದಾರೆ.

ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿ-(ಅತ್ಯುತ್ತಮ ಚಲನಚಿತ್ರ ವರದಿಗಳಿಗೆ) ಹಿರಿಯ ಪತ್ರಕರ್ತ ಮುರಳೀಧರ್ ಖಜಾನೆ, ಮಾ.ರಾಮಮೂರ್ತಿ ಸ್ಮಾರಕ ಪ್ರಶಸ್ತಿ-(ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಪತ್ರಕರ್ತರೊಬ್ಬರಿಗೆ) ಕೋಲಾರ ಕನ್ನಡ ಮಿತ್ರ ಸಂಪಾದಕರು ಕೋ.ನಾ.ಪ್ರಭಾಕರ್ ಅವರು ಆಯ್ಕೆಯಾಗಿದ್ದಾರೆ.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ-ಪ್ರಜಾವಾಣಿ ವರದಿಗಾರ ಭೀಮಸೇನ ವಜ್ಜಲ್, ಬಿ.ಎಸ್.ವೆಂಕಟರಾಂ ಪ್ರಶಸ್ತಿ(ಅತ್ಯುತ್ತಮ ಸ್ಕೂಪ್ ವರದಿಗೆ)- ವಾರ್ತಾಭಾರತಿ ಉಪ ಸಂಪಾದಕ ಮಹಮ್ಮದ್ ಇಮ್ತಿಯಾಝ್, ಪ್ರಜಾವಾಣಿ ವರದಿಗಾರ ರಾಜೇಶ್ ರೈ ಚೆಟ್ಲ ಅವರು ಆಯ್ಕೆಯಾಗಿದ್ದಾರೆ. 

ಇನ್ನುಳಿದಂತೆ ಡಿವಿಜಿ ಪ್ರಶಸ್ತಿಗೆ ಉದಯವಾಣಿ ಸಹಾಯಕ ಉಪಸಂಪಾದಕರಾದ ಮನೋಹರ ಪ್ರಸಾದ್, ಗೊಮ್ಮಟ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಪಾಟೀಲ್ ಪುಟ್ಟಪ್ಪ ಪ್ರಶಸ್ತಿಗೆ ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ ಆಯ್ಕೆಯಾಗಿದ್ದಾರೆ. ವಾರ್ಷಿಕ ಪ್ರಶಸ್ತಿಗಳನ್ನು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಾ.7 ಮತ್ತು 8ರಂದು ನಡೆಯುವ 35ನೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಇತರ ಪ್ರಶಸ್ತಿಗಳಿಗೆ ಆಯ್ಕೆಯಾದ ಪತ್ರಕರ್ತರ ಪಟ್ಟಿ ಈ ಕೆಳಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News