ದ್ವಿತೀಯ ಪಿಯು ಪರೀಕ್ಷೆ: ರಾಜ್ಯಾದ್ಯಂತ 1,016 ಕೇಂದ್ರಗಳಲ್ಲಿ ಆರಂಭ

Update: 2020-03-04 05:27 GMT

ಬೆಂಗಳೂರು, ಮಾ.4: ರಾಜ್ಯಾದ್ಯಂತ 1,016 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಬೆಳಗ್ಗೆ ಆರಂಭಗೊಂಡಿದೆ.

ಇಂದು ಭೌತಶಾಸ್ತ್ರ, ಇತಿಹಾಸ ಹಾಗೂ ಬೇಸಿಕ್ ಗಣಿತ ಪರೀಕ್ಷೆಗಳು ನಡೆಯಲಿದ್ದು, ಬೆಳಗ್ಗೆ 10:15ರಿಂದ ಮಧ್ಯಾಹ್ನ 1:45ರವರೆಗೆ ಪರೀಕ್ಷಾ ಅವಧಿಯಾಗಿದೆ. ಈ ಬಾರಿ 6.80 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದ 2,01,445, ವಾಣಿಜ್ಯ ವಿಭಾಗದ 2,61,674 ಹಾಗೂ ವಿಜ್ಞಾನ ವಿಭಾಗದ ಒಟ್ಟು 2,16,930 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಇಂದಿನಿಂದ ಆರಂಭವಾಗುವ ಪರೀಕ್ಷೆಯು ಮಾ.23ರಂದು ಮುಕ್ತಾಯಗೊಳ್ಳಲಿದೆ.

ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇತರ ಯಾವುದೇ ಅಕ್ರಮಗಳು ನಡೆಯದಂತೆ ಕಣ್ಗಾವಲಿಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಉತ್ತರ ಪತ್ರಿಕೆಗಳ ವೌಲ್ಯಮಾಪನಕ್ಕೆ ಈಗಾಗಲೇ ಒಟ್ಟು 35,156 ವೌಲ್ಯಮಾಪಕರು ನೋಂದಣಿ ಮಾಡಿಕೊಂಡಿದ್ದು, ಸಿಇಟಿ ಲಿತಾಂಶ ಪ್ರಕಟಗೊಂಡ ಕೂಡಲೇ ದ್ವಿತೀಯ ಪಿಯುಸಿ ಲಿತಾಂಶ ಪ್ರಕಟಿಸಲು ತೀರ್ಮಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News