ಮೈಕ್ರೋಸಾಫ್ಟ್ ನಿರ್ದೇಶಕರ ಮಂಡಳಿಯಿಂದ ಹೊರಬಂದ ಬಿಲ್ ಗೇಟ್ಸ್

Update: 2020-03-14 17:16 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಮಾ. 14: ಮೈಕ್ರೋಸಾಫ್ಟ್ ಕಂಪೆನಿಯ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ನಿರ್ದೇಶಕರ ಮಂಡಳಿಯಿಂದ ಹೊರಬಂದಿದ್ದಾರೆ ಎಂದು ಕಂಪೆನಿ ಶುಕ್ರವಾರ ಘೋಷಿಸಿದೆ. ಸಾಮಾಜಿಕ ಚಟುವಟಿಕೆಗಳಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡುವುದಕ್ಕಾಗಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.

ಕಂಪೆನಿಯ ದೈನಂದಿನ ವ್ಯವಹಾರಗಳಲ್ಲಿ ಭಾಗಿಯಾಗುವುದನ್ನು 64 ವರ್ಷದ ಉದ್ಯಮಿ ದಶಕದ ಹಿಂದೆಯೇ ನಿಲ್ಲಿಸಿದ್ದರು ಹಾಗೂ ಬಳಿಕ ತನ್ನ ಹೆಚ್ಚಿನ ಗಮನವನ್ನು ಪತ್ನಿ ಮೆಲಿಂಡಾ ಜೊತೆಗೆ ಸ್ಥಾಪಿಸಿರುವ ಗೇಟ್ಸ್ ಫೌಂಡೇಶನ್‌ನತ್ತ ಹರಿಸಿದ್ದರು.

ಅವರು 2014ರವರೆಗೆ ಮೈಕ್ರೋಸಾಫ್ಟ್ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಹಾಗೂ ಈಗ ಮಂಡಳಿಯಿಂದ ಸಂಪೂರ್ಣವಾಗಿ ಹೊರಹೋಗಿದ್ದಾರೆ.

ಬಿಲ್ ಗೇಟ್ಸ್ ಮತ್ತು ಅವರ ಬಾಲ್ಯದ ಗೆಳೆಯ ಪೌಲ್ ಅಲನ್ ಜೊತೆಯಾಗಿ 1975ರಲ್ಲಿ ಮೈಕ್ರೋಸಾಫ್ಟ್ ಕಂಪೆನಿಯನ್ನು ಸ್ಥಾಪಿಸಿದ್ದಾರೆ. ಪೌಲ್ ಅಲನ್ 2018ರಲ್ಲಿ ನಿಧನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News