ಬೆಂಗಳೂರು ವಿವಿ: ಅಶ್ವತ್ಥ ಕುಮಾರ್‌, ತ್ರಿಪುರಾಗೆ ಪಿಎಚ್‌ಡಿ ಪ್ರದಾನ

Update: 2020-03-21 18:52 GMT

ಬೆಂಗಳೂರು, ಮಾ.21: ಯಲಹಂಕದ ಶೇಷಾದ್ರೀಪುರಂ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕೆಲಸ ನಿರ್ವಹಿಸುತ್ತಿರುವ ಅಶ್ವತ್ಥ ಕುಮಾರ್ ಮಂಡಿಸಿದ ‘ಡೈಮೆನ್ಷನ್ಸ್ ಆಫ್ ಪ್ರೈಸಿಂಗ್ ಸ್ಟ್ರಾಟೆಜೀಸ್ ಇನ್ ರಿಯಲ್‌ ಎಸ್ಟೇಟ್ ಸೆಕ್ಟರ್ ಇನ್ ಕರ್ನಾಟಕ- ಎ ಸ್ಟಡಿ ವಿತ್ ಸ್ಪೆಷಲ್ ರೆಫರೆನ್ಸ್ ಟು ಬೆಂಗಳೂರು’ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಆರ್. ಸರ್ವಮಂಗಳಾ ಮಾರ್ಗದರ್ಶಕರಾಗಿದ್ದರು.

ಸಂಶೋಧಕಿ ತ್ರಿಪುರ

ಬೆಂಗಳೂರು, ಮಾ.21: ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ತ್ರಿಪುರಾ ಮಂಡಿಸಿದ ‘ಎ ಸೋಷಿಯೋ ಲೀಗಲ್ ಸ್ಟಡಿ ಆ್ ಪ್ರೊಟೆಕ್ಷನ್ ಆಫ್ ಕಾಮರ್ಸ್ ರೈಟ್ಸ್ ಅಂಡ್ ಪ್ಲಾಂಟ್ ವೆರೈಟೀಸ್ ವಿತ್ ಸ್ಪೆಷಲ್ ರೆಫರೆನ್ಸ್ ಟು ಸದ್ರನ್ ಡಿಸ್ಟ್ರಿಕ್ಟ್ಸ್ ಆಫ್ ಕರ್ನಾಟಕ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಜ್ಯೋತಿ ವಿಶ್ವನಾಥ್ ಮಾರ್ಗದರ್ಶಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News