ಅಧಿಕೃತ ಆದೇಶವಿಲ್ಲದಿದ್ದರೂ ಪಿಜಿ ಖಾಲಿ ಮಾಡಿಸುತ್ತಿರುವ ಮಾಲಕರು: ಆರೋಪ

Update: 2020-03-22 18:29 GMT

ಬೆಂಗಳೂರು, ಮಾ.22: ಬಿಬಿಎಂಪಿಯಿಂದ ಅಧಿಕೃತ ಆದೇಶ ಬಾರದಿದ್ದರೂ ಪಿಜಿ ಮಾಲಕರು ಪಿಜಿಗಳಿಂದ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿದ್ದರೆ, ಸುರಕ್ಷತಾ ಕ್ರಮವಾಗಿ ವಿದ್ಯಾರ್ಥಿಗಳಿ ಪಿ.ಜಿ ತೊರೆದೆ ಮನೆಗಳಿಗೆ ಹೋಗುವುದು ಉತ್ತಮ ಎಂದು ಈ ಹಿಂದೆ ಬಿಬಿಎಂಪಿ ಸಲಹೆ ನೀಡಿತ್ತು. ಆದರೆ, ಪಿಜಿ ಮಾಲೀಕರು ಮುಂಜಾಗ್ರತಾ ಕ್ರಮವಾಗಿ ಪಿಜಿಗಳಿಂದಲೇ ವಿದ್ಯಾರ್ಥಿಗಳನ್ನು ಖಾಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೂ ಕೆಲವೆಡೆ ವಿದ್ಯಾರ್ಥಿಗಳೇ ಸ್ವಯಂ ಪ್ರೇರಿತರಾಗಿ ಕೊಠಡಿಗಳನ್ನು ಖಾಲಿ ಮಾಡುತ್ತಿದ್ದಾರೆ.

ಬಿಟಿಎಂ ಲೇಔಟ್ ನ ಪಿಜಿಯೊಂದರಲ್ಲಿದ್ದ ವಿದ್ಯಾರ್ಥಿಯೊಬ್ಬರು ಮಾತನಾಡಿ, ಕಾಲೇಜು ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ನನ್ನ ಸ್ನೇಹಿತರು ಪಿಜಿ ಖಾಲಿ ಮಾಡುತ್ತಿದ್ದಾರೆ. ಪಿಜಿ ಮಾಲಕರು ಕೂಡ ಖಾಲಿ ಮಾಡುವಂತೆ ತಿಳಿಸುತ್ತಿದ್ದಾರೆ. ಆದರೆ, ಕೊರೋನಾ ವೈರಸ್ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಹೊರಗೆ ಹೋಗಲು ಭಯವಾಗುತ್ತಿದೆ ಎಂದು ಹೇಳಿದ್ದಾರೆ.

ಪಿಜಿ ಮಾಲಕರು ಬಿಬಿಎಂಪಿಯಿಂದ ಆದೇಶವಿದೆ ಎಂದು ಹೇಳುತ್ತಿದ್ದಾರೆ. ಇದೀಗ ನಾವು ಜಯನಗರದಲ್ಲಿರುವ ನನ್ನ ಸ್ನೇಹಿತನ ಮನೆಯಲ್ಲಿದ್ದೇವೆಂದು ತಿಳಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಪಿಜಿ ಖಾಲಿ ಮಾಡಿಸಲು ನಾವು ಯಾವುದೇ ಆದೇಶ ನೀಡಿಲ್ಲ. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಷ್ಟೇ ತಿಳಿಸಿದ್ದೇವೆ. ಯಾರಿಗೂ ಬಲವಂತದಿಂದ ಪಿಜಿ ಖಾಲಿ ಮಾಡಿಸಬಾರದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News