ಕಳವು ಪ್ರಕರಣ: ಐವರ ಬಂಧನ, 74.47 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

Update: 2020-03-23 12:59 GMT

ಬೆಂಗಳೂರು, ಮಾ.23: ಕಳವು ಪ್ರಕರಣ ಸಂಬಂಧ ಐವರನ್ನು ಬಂಧಿಸಿರುವ ಇಲ್ಲಿನ ಹನುಮಂತನಗರ ಠಾಣಾ ಪೊಲೀಸರು 74.47 ಲಕ್ಷ ರೂ. ಮೌಲ್ಯದ ಮಾಲುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀರಾಮಪುರದ ದಯಾನಂದ ನಗರದ ಜಯ್‌ರಾಜ್ ಚೌಹಾಣ್(46), ರಾಜಸ್ತಾನದ ಶಿರೋ ಜಿಲ್ಲೆಯ ಶಿಹೋಗಂಜಿಯ ಉತ್ತಮ್ ಸಿಂಗ್(25), ಅಮರ್ ಸಿಂಗ್(25) ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಮೂವರು ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿಯಿದ್ದು ವಿಚಾರಣೆ ನಡೆಸಲಾಗಿದೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಇಂದ್ರ ಸಿಂಗ್‌ಗಾಗಿ ಶೋಧ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ಮಾತಿ ನೀಡಿದ್ದಾರೆ.

ಆರೋಪಿಗಳು ಕಳೆದ ಜ.28 ರಂದು ಬಿಎಸ್‌ಕೆ ಮೊದಲ ಹಂತದ 5ನೇ ಕ್ರಾಸ್‌ನ ಎಲೆಕ್ಟ್ರಿಕಲ್ ಸಾಮಗ್ರಿಗಳ ಉದ್ಯಮಿ ದೀಪಕ್ ಅವರು ಕುಟುಂಬ ಸಮೇತ ಊರಿಗೆ ಹೋಗಿದ್ದು ಈ ವೇಳೆ ಬಂಧಿತ ಆರೋಪಿಗಳು ಸೇರಿ 6 ಮಂದಿ ಮನೆಗೆ ಬಂದಿದ್ದು, ಕಾವಲಿಗೆ ಇದ್ದ ಸತ್ಯನಾರಾಯಣ ಎಂಬುವವರ ಕೈ ಕಾಲು ಕಟ್ಟಿ ಬೆದರಿಸಿ ನಗದು, ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಹನುಮಂತನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News