ವೆಂಟಿಲೇಟರ್, ಮಾಸ್ಕ್‌ಗಳ ರಫ್ತು ನಿಷೇಧಕ್ಕೆ ವಿಳಂಬ: ಮೋದಿಗೆ ರಾಹುಲ್ ತರಾಟೆ

Update: 2020-03-23 15:51 GMT

ಹೊಸದಿಲ್ಲಿ, ಮಾ. 23: ಕೊರೋನವೈರಸ್ ಪಿಡುಗಿನ ನಡುವೆ ವೆಂಟಿಲೇಟರ್ ಮತ್ತು ಸರ್ಜಿಕಲ್ ಮಾಸ್ಕ್‌ಗಳಂತಹ ಅಗತ್ಯ ಜೀವರಕ್ಷಕ ಸಾಧನಗಳ ರಫ್ತನ್ನು ನಿಷೇಧಿಸಲು ನಿರ್ಧಾರದಲ್ಲಿ ವಿಳಂಬಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಾಳಿ ನಡೆಸಿದ್ದಾರೆ.

ಸರಕಾರವು ಮಾ.19ರಂದು ಎಲ್ಲ ವೆಂಟಿಲೇಟರ್‌ಗಳು,ಸರ್ಜಿಕಲ್/ಡಿಸ್ಪೋಸೇಬಲ್ ಮಾಸ್ಕ್‌ಗಳು ಮತ್ತು ಮಾಸ್ಕ್‌ಗಳ ತಯಾರಿಕೆಗೆ ಬಳಸುವ ಜವಳಿ ಕಚ್ಚಾ ವಸ್ತುಗಳ ನಿಷೇಧವನ್ನು ನಿಷೇಧಿಸಿತ್ತು.

‘‘ಮಾನ್ಯ ಪ್ರಧಾನಿಯವರೇ,ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯ ಹೊರತಾಗಿಯೂ ಭಾರತ ಸರಕಾರವು ವೆಂಟಿಲೇಟರ್ ಮತ್ತು ಮಾಸ್ಕ್‌ಗಳ ಸಾಕಷ್ಟು ದಾಸ್ತಾನಿರಿಸುವ ಬದಲು ಮಾ.19ರವರೆಗೆ ಅವುಗಳ ರಫ್ತಿಗೆ ಅವಕಾಶ ನೀಡಿದ್ದು ಏಕೆ? ಈ ಬಗೆಯ ಆಟಕ್ಕೆ ಯಾವ ಶಕ್ತಿಗಳು ಉತ್ತೇಜನ ನೀಡಿದ್ದವು? ಇದು ಕ್ರಿಮಿನಲ್ ಒಳಸಂಚಲ್ಲವೇ’’ ಎಂದು ರಾಹುಲ್ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News