ಮಧ್ಯಪ್ರದೇಶದ ಸ್ಪೀಕರ್ ಪ್ರಜಾಪತಿ ರಾಜೀನಾಮೆ

Update: 2020-03-24 05:40 GMT

ಭೋಪಾಲ್: ಬಿಜೆಪಿಯ ಹಿರಿಯ ಮುಖಂಡ ಶಿವರಾಜ್ ಸಿಂಗ್ ಚೌಹಾನ್ ರಾಜ್ಯ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಮಧ್ಯಪ್ರದೇಶ ವಿಧಾನಸಭಾ ಸ್ಪೀಕರ್ ಎನ್ ಪಿ ಪ್ರಜಾಪತಿತಮ್ಮ ಸ್ಥಾನಕ್ಕೆ   ರಾಜೀನಾಮೆ ನೀಡಿದರು.

ಡೆಪ್ಯೂಟಿ ಸ್ಪೀಕರ್ ಹಿನಾ ಕಾವ್ರೆ ಅವರಿಗೆ ಸೋಮವಾರ ತಡರಾತ್ರಿ  ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಪ್ರಜಾಪತಿ ಅವರು ನೈತಿಕ ಆಧಾರದ ಮೇಲೆ ರಾಜ್ಯ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದರು. 

ಕಳೆದ ವರ್ಷದ  ಜನವರಿಯಲ್ಲಿ ಕಮಲ್ ನಾಥ್ ಅವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಬಿಜೆಪಿಯ ಪ್ರತಿಭಟನೆಯ ನಡುವೆಯೂ  ಗೋಟೆಗಾಂವ್ ಕಾಂಗ್ರೆಸ್ ಶಾಸಕ ಪ್ರಜಾಪತಿ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು..

22 ಕಾಂಗ್ರೆಸ್ ಶಾಸಕರ ರಾಜೀನಾಮೆಯ ನಂತರ ಕಮಲ್ ನಾಥ್ ತಮ್ಮ ಸರ್ಕಾರ ಬಹುಮತ ಕಳೆದುಕೊಂಡಿದ್ದರಿಂದ ಕಳೆದ ವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

61 ವರ್ಷದ ಚೌಹಾನ್ ಸೋಮವಾರ ರಾತ್ರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಜ ಭವನದಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ರಾತ್ರಿ 9 ಗಂಟೆಗೆ ರಾಜ್ಯಪಾಲ ಲಾಲ್ ಜಿ ಟಂಡನ್ ಅವರಿಂದ  ಪ್ರಮಾಣವಚನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News