ಬಿಜೆಪಿ ಅಧಿಕಾರಕ್ಕೇರಿದ ನಂತರ ಸಿಂಧಿಯಾ ವಿರುದ್ಧದ ಫೋರ್ಜರಿ ಪ್ರಕರಣದ ತನಿಖೆ ಕೈಬಿಟ್ಟ ಸರಕಾರ

Update: 2020-03-24 13:57 GMT

ಭೋಪಾಲ್: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧದ ಹಳೆಯ ಫೋರ್ಜರಿ ಪ್ರಕರಣದ ತನಿಖೆಯನ್ನು ಮರು ಆರಂಭಿಸಲು ಹಿಂದಿನ ಕಮಲ್ ನಾಥ್ ಸರಕಾರ ನಿರ್ಧಾರ ಕೈಗೊಂಡಿದ್ದರೆ, ಇದೀಗ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಧ್ಯ ಪ್ರದೇಶ ಆರ್ಥಿಕ ಅಪರಾಧಗಳ ಘಟಕ ಈ ಪ್ರಕರಣದ ತನಿಖೆಯನ್ನು ಕೈಬಿಟ್ಟಿದೆ. ಇದೀಗ ಸಿಂಧಿಯಾ ಮಧ್ಯಪ್ರದೇಶದಿಂದ ಬಿಜೆಪಿಯ ರಾಜ್ಯಸಭಾ ಅಭ್ಯರ್ಥಿಯಾಗಿದ್ದಾರೆ.

ತನಿಖೆಯನ್ನು ನಾಲ್ಕೈದು ದಿನಗಳ ಹಿಂದೆ ಕೈಬಿಡಲಾಗಿದ್ದು, ಪರಿಶೀಲಿಸಿದಾಗ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.

2014ರಲ್ಲಿ ದಾಖಲಾಗಿದ್ದ ಭೂಕಬಳಿಕೆ ಪ್ರಕರಣವನ್ನು 2018ರಲ್ಲಿ ಆರ್ಥಿಕ ಅಪರಾಧಿಗಳ ವಿಭಾಗವು ಸಾಕ್ಷ್ಯಾಧಾರಗಳ ಕೊರತೆಯಿಂದ ಕೈಬಿಟ್ಟಿದ್ದರೆ, ಆ ಪ್ರಕರಣದ ದೂರುದಾರ ತನ್ನ ಬಳಿ ಪ್ರಕರಣದ ಹೊಸ ಸಾಕ್ಷ್ಯಗಳಿವೆ ಎಂದು  ಕೆಲ ದಿನಗಳ ಹಿಂದೆ ಹೇಳಿದ್ದರಿಂದ ಪ್ರಕರಣ ಮರುಜೀವ ಪಡೆದಿತ್ತು.

ಸುರೇಂದ್ರ ಶ್ರೀವಾಸ್ತವ ಎಂಬವರು ದೂರು ದಾಖಲಿಸಿದವರಾಗಿದ್ದು, ಜಮೀನು ಮಾರಾಟದ ವೇಳೆ ಫೋರ್ಜರಿ ದಾಖಲೆಗಳನ್ನು ಹಾಜರುಪಡಿಸಿದ ಆರೋಪ ಸಿಂಧಿಯಾ ಕುಟುಂಬದ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News