ತೆರಿಗೆ ಸಂಗ್ರಹ: ಕೇಂದ್ರದಿಂದ 11,887 ಕೋಟಿ ರೂ. ಬರುವ ನಿರೀಕ್ಷೆ- ಮುಖ್ಯಮಂತ್ರಿ ಬಿಎಸ್‌ವೈ

Update: 2020-03-24 14:15 GMT

ಬೆಂಗಳೂರು, ಮಾ.24: ರಾಜ್ಯದ ತೆರಿಗೆ ಸಂಗ್ರಹದಲ್ಲಿ 2020-21ರ ಗುರಿ ಸಮೀಪದಲ್ಲಿದ್ದೇವೆ ಮತ್ತು ಕೇಂದ್ರದಿಂದ ಕಡಿತವಾಗಿದ್ದ 11,887 ಕೋಟಿ ರೂ.ಪಡೆಯಲು ಈಗಾಗಲೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಹಣ ನಮಗೆ ಬರುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲೆ ನಡೆದ ಚರ್ಚೆಗೆ ಸಂಬಂಧಿಸಿದ ಉತ್ತರ ನೀಡಿದ ಅವರು, ಕೇಂದ್ರ ಸರಕಾರ ಬಿಹಾರ ರಾಜ್ಯಕ್ಕೆ ಶೇ.10 ಮತ್ತು ಉತ್ತರಪ್ರದೇಶಕ್ಕೆ ಶೇ.17 ತೆರಿಗೆ ಪಾವತಿಸಿದೆ. ಆದರೆ, ನಮಗೇಕೆ ಶೇ.4.7 ಇದ್ದದ್ದನ್ನು ಶೇ.3.64ಕ್ಕೆ ಇಳಿಸಿದ್ದಾರೆ ಎಂದು ವಿಪಕ್ಷದ ಸದಸ್ಯರು ಪ್ರಶ್ನೊಸಿದ್ದರು. ಇದಕ್ಕೆ ಕಾರಣ 15ನೆ ಹಣಕಾಸು ಆಯೋಗ ರಾಜ್ಯಗಳಿಗೆ ತೆರಿಗೆ ಆದಾಯವನ್ನು ಹಂಚಿಕೆ ಮಾಡಲು ಮಾಡಿಕೊಂಡ ಹೊಸ ನಿಯಮಗಳು ಎಂದು ಯಡಿಯೂರಪ್ಪ ತಿಳಿಸಿದರು.

ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಕಡಿತಗೊಳಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ. ಆದರೆ, ಇದು ಅದದ್ದು 15ನೆ ಹಣಕಾಸಿನ ಹೊಸ ನಿಯಮಾವಳಿಗಳಿಂದ. ಕೇಂದ್ರ ಹಣಕಾಸು ಸಚಿವರು ನಮ್ಮ ಪರವಾಗಿದ್ದು, ನಮಗೆ ಆದಷ್ಟು ಬೇಗ ಹಣ ಬಿಡುಗಡೆ ಆಗುವ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News