ಕೊರೋನವೈರಸ್‌ನಿಂದ ಚೇತರಿಸಿಕೊಂಡ 101 ವರ್ಷದ ಅಜ್ಜ

Update: 2020-03-27 17:16 GMT

ರೋಮ್, ಮಾ. 27: ಭೀಕರ ಸಾಂಕ್ರಾಮಿಕ ಕಾಯಿಲೆ ನೂತನ-ಕೊರೋನವೈರಸ್‌ಗೆ ತತ್ತರಿಸಿ ಜಗತ್ತು ಮದುಡಿಕೊಂಡಿರುವಂತೆಯೇ, ಆಶಾದಾಯಕ ಸುದ್ದಿಯೊಂದು ಇಟಲಿಯಿಂದ ಹೊರಬಿದ್ದಿದೆ. ಇಟಲಿಯ ಕರಾವಳಿ ನಗರ ರಿಮಿನಿಯಲ್ಲಿ 101 ವರ್ಷದ ವ್ಯಕ್ತಿಯೊಬ್ಬರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಈ ಕಾಯಿಲೆಯಿಂದ ಚೇತರಿಸಿಕೊಂಡ ಅತ್ಯಂತ ಹಿರಿಯ ವ್ಯಕ್ತಿ ಅವರಾಗಿದ್ದಾರೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.

1919ರಲ್ಲಿ ಜನಿಸಿರುವ ಅವರಲ್ಲಿ ಸೋಂಕು ಪತ್ತೆಯಾದ ಬಳಿಕ ಒಂದು ವಾರದ ಹಿಂದೆ ರಿಮಿನಿಯದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅವರು ಚೇತರಿಸಿಕೊಳ್ಳಲು ಆರಂಭಿಸಿದಂತೆಯೇ, ಆಸ್ಪತ್ರೆಯ ಎಲ್ಲರೂ ಆ ಬಗ್ಗೆ ಮಾತನಾಡಲು ಆರಂಭಿಸಿದರು ಎಂದು ರಿಮಿನಿ ನಗರದ ಉಪ ಮೇಯರ್ ಗ್ಲೋರಿಯಾ ಲಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News