ಕೇರಳದಲ್ಲಿ ಕೊರೋನ ಸೋಂಕಿಗೆ ಮೊದಲ ಬಲಿ

Update: 2020-03-28 07:06 GMT

ಕೊಚ್ಚಿ, ಮಾ.28: ಕೇರಳದಲ್ಲಿ ಕೊರೋನ ವೈರಸ್ ಸೋಂಕಿತರಾಗಿದ್ದ  ಕೊಚ್ಚಿ ಮೂಲದ  69 ವರ್ಷದ ವೃದ್ಧರೊಬ್ಬರು  ಮೃತಪಟ್ಟಿದ್ದಾರೆ. ಇದರೊಂದಿಗೆ ಕೇರಳದಲ್ಲಿ ಕೊರೋನ ಸೋಂಕಿಗೆ ಮೊದಲ ಬಲಿಯಾಗಿದೆ.

ದುಬೈಯಿಂದ ವಾಪಸಾಗಿದ್ದ ಇವರು  ನ್ಯುಮೋನಿಯಾದಿಂದ ಮಾರ್ಚ್ 22 ರಂದು ಆಸ್ಪತ್ರಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕೊರೋನ ಸೋಂಕು ಇವರಿಗೆ ತಗಲಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಕೊರೋನಕ್ಕೆ ಬಲಿಯಾದ ವ್ಯಕ್ತಿ  ಈ ಮೊದಲು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಹೃದಯ ರೋಗಿಯಾಗಿದ್ದರು ,  ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕೇರಳ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 137ಕ್ಕೇರಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News