ಕೋವಿಡ್-19 ಆರಂಭಕ್ಕೂ ಮುನ್ನ 3.4 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಿದ್ದ ಜೆಫ್ ಬೆಝೊಸ್

Update: 2020-03-28 08:17 GMT

ನ್ಯೂಯಾರ್ಕ್: ಜಗತ್ತಿನ ಹಲವೆಡೆ ಷೇರು ಮಾರುಕಟ್ಟೆ ಕುಸಿತದಿಂದ ಸಾವಿರಾರು ಮಂದಿ ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಂಡಿದ್ದರೆ, ಆರ್ಥಿಕ ಹಿನ್ನಡೆಯಿಂದ ಲಕ್ಷಗಟ್ಟಲೆ ಜನರು ಉದ್ಯೋಗಗಳನ್ನೂ ಕಳೆದುಕೊಂಡಿದ್ದಾರೆ. ಆದರ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆಝೋಸ್ ಮಾತ್ರ ಈ ವರ್ಷಾರಂಭಕ್ಕೆ ಅವರ ಬಳಿ ಇದ್ದ ಸಂಪತ್ತಿಗಿಂತ 5.5 ಶತಕೋಟಿ ಡಾಲರ್ ಹೆಚ್ಚು ಸಂಪತ್ತಿನ ಒಡೆಯರಾಗಿದ್ದಾರೆ.

ಅವರ ಒಡೆತನದ ಅಮೆಝಾನ್ ಷೇರುಗಳಲ್ಲಿಯೇ ಇರುವ ಅವರ ಬಹುಪಾಲು ಸಂಪತ್ತು ಗುರುವಾರ 3.9 ಶತಕೋಟಿ  ಡಾಲರ್ ಏರಿಕೆಯಾಗಿ  120 ಶತಕೋಟಿ ಡಾಲರ್ ತಲುಪಿದೆ.

ಈ ವಾರ ಮೂರು ದಿನಗಳ ಸ್ಟಾಕ್ ಮಾರ್ಕೆಟ್ ರ್ಯಾಲಿಯಿಂದಾಗಿ ಅಮೆಝಾನ್ ಷೇರುಗಳು ತಮ್ಮ ಈ ಹಿಂದಿನ  ನಷ್ಟದಿಂದ  ಚೇತರಿಸಿಕೊಂಡಿವೆ. ಅಮೆಝಾನ್ ಷೇರು ಬೆಲೆಗಳು ಫೆಬ್ರವರಿಯಲ್ಲಿ ಗರಿಷ್ಠ ಮಟ್ಟ 2,170 ಡಾಲರ್ ಆಗಿದ್ದರೆ  ಈಗ ಅವುಗಳ ಬೆಲೆ ಅದಕ್ಕಿಂತ ಸ್ವಲ್ಪ ಕಡಿಮೆ, ಅಂದರೆ 1,920 ಡಾಲರ್ ಆಗಿದೆ. ಬೆಝೋಸ್ ಬಳಿ ಅಮೆಝಾನ್‍ನ ಒಟ್ಟು ಷೇರುಗಳ ಪೈಕಿ ಶೇ 12ರಷ್ಟು ಷೇರುಗಳಿವೆ.

ಜಗತ್ತಿನೆಲ್ಲೆಡೆ ಕೊರೋನ ಹಾವಳಿ ಆರಂಭಗೊಳ್ಳುವ ಮುಂಚೆಯೇ ಆವರು  ತಮ್ಮಲ್ಲಿದ್ದ ಷೇರುಗಳ ದೊಡ್ಡ ಪಾಲನ್ನು ಮಾರಾಟ ಮಾಡಿ ನಷ್ಟದಿಂದ ಬಚಾವಾಗಿದ್ದರು. ಫೆಬ್ರವರಿ ಮೊದಲ ವಾರದಲ್ಲಿ  ಬೆಝೋಸ್ 3.4 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News