ಬೆಂಗಳೂರು : ಕ್ವಾರಂಟೈನ್ ಉಲ್ಲಂಘಿಸಿದ ಇಬ್ಬರ ವಿರುದ್ಧ ಎಫ್‍ಐಆರ್

Update: 2020-03-28 12:18 GMT

ಬೆಂಗಳೂರು, ಮಾ.28: ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಬೀದಿಗಳಲ್ಲಿ ತಿರುಗುತ್ತಾ ಆತಂಕ ಮೂಡಿಸಿದ್ದ ಇಬ್ಬರು ವ್ಯಕ್ತಿಗಳನ್ನು ಫೋಲೀಸರು ಬಂಧಿಸಿದ್ದಾರೆ.

ಬನಶಂಕರಿಯ 27 ವರ್ಷದ ವ್ಯಕ್ತಿಗೆ ಹೋಮ್ ಕ್ವಾರಂಟೈನ್ ಮುದ್ರೆ ಹಾಕಲಾಗಿತ್ತು, ಹೀಗಿದ್ದರೂ ಆತ ಸುಮಾರು ಮೂರು ಬಾರಿ ಮನೆಯಿಂದ ಹೊರಗೆ ಬಂದು ಸುತ್ತಾಡುತ್ತಿದ್ದ. ಹೀಗಾಗಿ ಅವನ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿದ್ದಾರೆ. ಅಲ್ಲದೇ, ಹೋಂ ಕ್ವಾರಂಟೈನ್‍ನಲ್ಲಿ ಇರಬೇಕಾದ ವ್ಯಕ್ತಿ ಜಾಲಹಳ್ಳಿ ಹಾಗೂ ಸುತ್ತಮುತ್ತ ಓಡಾಡುತ್ತಿದ್ದದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು. ಮಾ.17 ರಂದು ಇಂಡೋನೇಷ್ಯಾದಿಂದ ಬಂದಿದ್ದ ವ್ಯಕ್ತಿ ಕೈಗೆ ಮುದ್ರೆ ಹಾಕಲಾಗಿತ್ತು.

ನಿಷೇಧಾಜ್ಞೆ ನಡುವೆಯೂ ಆತ ಜಾಲಹಳ್ಳಿ ಬಳಿ ಬುಧವಾರ ಬೆಳಗ್ಗೆ ಓಡಾಡುತ್ತಿದ್ದ. ಆತನ ಕೈ ಮೇಲೆ ಮುದ್ರೆ ನೋಡಿದ್ದ ಪೊಲೀಸರು, ಆತನನ್ನು ಪ್ರಶ್ನಿಸಿದ್ದರು. ನಗರ ಸುತ್ತಲು ಬಂದಿರುವುದಾಗಿ ಆತ ಹೇಳಿದ್ದ. ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News