​ರಿಲಯನ್ಸ್‌ನಿಂದ ಕೊರೋನ ವಿರುದ್ಧದ ಸಮರಕ್ಕೆ 500 ಕೋಟಿ ರೂ. ದೇಣಿಗೆ

Update: 2020-03-31 03:40 GMT

ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರು ಪ್ರಧಾನ ಮಂತ್ರಿಯವರ ಕೋವಿಡ್-19 ನಿಧಿಗೆ 500 ಕೋಟಿ ರೂ. ದೇಣಿಗೆ ನೀಡುವ ವಾಗ್ದಾನ ಮಾಡಿದ್ದಾರೆ.

ಭಾರತದ ಮೊಟ್ಟಮೊದಲ ಬಹುಕೋಟಿ ಯೋಜನೆಯಾದ ಕೊರೋನ ವೈರಸ್ ಆಸ್ಪತ್ರೆ ಸ್ಥಾಪನೆ, ಅಗತ್ಯವಿರುವವರಿಗೆ ಊಟ ಮತ್ತು ತುರ್ತು ವಾಹನಗಳಿಗೆ ಇಂಧನ ಒದಗಿಸುವ ನಿರ್ಧಾರವನ್ನು ಈ ಮೊದಲೇ ಅಂಬಾನಿ ಘೋಷಿಸಿದ್ದರು.

ಪ್ರಧಾನಿ ನಿಧಿಗೆ ನೆರವು ನೀಡುವ ಜತೆಗೆ ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳಿಗೆ ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ತಲಾ 5 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ಕೊರೋನ ದಾಳಿಯ ವಿರುದ್ಧ ದೇಶದ ಹೋರಾಟಕ್ಕೆ ಕೈಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿಗೆ ಸ್ಪಂದಿಸಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) 500 ಕೋಟಿ ರೂಪಾಯಿ ದೇಣಿಗೆ ಘೋಷಿಸುತ್ತಿದೆ ಎಂದು ಪ್ರಕಟಣೆ ವಿವರಿಸಿದೆ.

ಕೊರೋನ ದಾಳಿಯಿಂದ ಎದುರಾಗಿರುವ ದೊಡ್ಡ ಸವಾಲಿನ ವಿರುದ್ಧ ಗೆಲುವು ಸಾಧಿಸಲು ಅನುವಾಗುವಂತೆ ಹೋರಾಟಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ತಳಮಟ್ಟದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದೆ. ದೇಶ ಸರ್ವಸನ್ನದ್ಧತೆ, ಆಹಾರ, ಪೂರೈಕೆ, ಸುರಕ್ಷತೆ ಮತ್ತು ಸಂಪರ್ಕಕ್ಕೆ ಅಗತ್ಯ ನೆರವು ನೀಡುತ್ತಿದೆ ಎಂದು ಕಂಪನಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News