ಯಾರು ಮಾಸ್ಕ್ ಧರಿಸಬೇಕು, ಯಾರು ಮಾಸ್ಕ್ ಧರಿಸಬೇಕಾಗಿಲ್ಲ?: ಇಲ್ಲಿದೆ ಮಾಹಿತಿ

Update: 2020-04-01 05:58 GMT

ಬೆಂಗಳೂರು, ಎ.1: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ನಡುವೆಯೇ ಮಾಸ್ಕ್ ಧರಿಸುವ ಕುರಿತಂತೆ ಗೊಂದಲ ಮುಂದುವರಿದಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಯಾರು ಮಾಸ್ಕ್ ಧರಿಸಬೇಕು, ಯಾರು ಮಾಸ್ಕ್ ಧರಿಸಬೇಕಾಗಿಲ್ಲ ಎಂಬುದರ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಪ್ರಕಟನೆಯೊಂದನ್ನು ಹೊರಡಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

ಕೊರೋನ ವೈರಸ್ ಸೋಂಕು ಗುಣಲಕ್ಷಣ ಕಂಡುಬಂದವರು ಮಾತ್ರವೇ ಮಾಸ್ಕ್ ಧರಿಸಿದರೆ ಸಾಕು. ವಿನಾ ಉಳಿದವರಿಗೆ ಮಾಸ್ಕ್ ಧರಿಸುವಂತೆ ಕಡ್ಡಾಯ ಮಾಡುವಂತಿಲ್ಲ ಎಂದು ಆಯುಕ್ತಾಲಯ ಸ್ಪಷ್ಟಪಡಿಸಿದೆ.

ಕೆಲವು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಅಂಗಡಿಗಳು ಮತ್ತಿತರ ಕಡೆಗಳಲ್ಲಿ ಜನರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಹೇಳಲಾಗುತ್ತಿದೆ. ಈಗಾಗಲೇ ಮಾಸ್ಕ್ ಯಾರು ಧರಿಸವೇಕು ಎಂಬ ಕುರಿತು ಸರಕಾರ ತನ್ನ ಸುತ್ತೋಲೆ ಮತ್ತು ಸಂವಹನಗಳ ಮೂಲಕ ಸ್ಪಷ್ಟವಾದ ಸೂಚನೆಗಳನ್ನು ನೀಡಿದೆ. ಆದರೂ ಈ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಇಲಾಖೆ ಬಿಡುಗಡೆ ಮಾಡಿರುವ ಪ್ರಕಟನೆ ತಿಳಿಸಿದೆ.

ಯಾರೆಲ್ಲ ಮಾಸ್ಕ್ ಧರಿಸಬೇಕು

* ಶೀತ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ ಇರುವವರು

* ಶಂಕಿತ ಕೋವಿಡ್ ರೋಗಿಗಳು ಮತ್ತು ರೋಗ ದೃಢಪಟ್ಟವರನ್ನು ಆರೈಕೆ ಮಾಡುವವರು

* ಉಸಿರಾಟದ ತೊಂದರೆ ಇರುವ ರೋಗಿಗಳನ್ನು ನೋಡಿಕೊಳ್ಳುವ ಆರೋಗ್ಯ ಕಾರ್ಯಕರ್ತರು

* ರೋಗಿಗಳು ಅಥವಾ ಶಂಕಿತರನ್ನು ಉಪಚರಿಸುವವರು ಎನ್-95 ಮಾಸ್ಕ್ ಧರಿಸಬೇಕು. ಉಳಿದವರು ಮೂರು ಲೇಯರ್ ಹೊಂದಿರುವ ಸರ್ಜಿಕಲ್ ಮಾಸ್ಕ್ ಧರಿಸಿದರೆ ಸಾಕು ಎಂದು ಆಯುಕ್ತಾಲಯ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News