ದಿಲ್ಲಿ ನಿಝಾಮುದ್ದೀನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 19 ಮಂದಿ ಕ್ವಾರಂಟೈನ್ ನಲ್ಲಿ: ಡಿಸಿಎಂ ಕಾರಜೋಳ

Update: 2020-04-01 06:42 GMT

ಬೆಂಗಳೂರು, ಎ.1: ತಬ್ಲೀಗಿ ಜಮಾಅತ್ ನ ದಿಲ್ಲಿ ಕೇಂದ್ರ ಕಚೇರಿಯಾಗಿರುವ ಮರ್ಕಝ್ ನಿಝಾಮುದ್ದೀನ್ ನಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಲಬುರಗಿಯ 19 ಜನರನ್ನು ಜಿಲ್ಲಾಡಳಿತವು ಇಎಸ್ ಐ ಆಸ್ಪತ್ರೆಯ ಕ್ವಾರಂಟೈನ್ ನಲ್ಲಿ ಇಟ್ಟು, ತೀವ್ರ ನಿಗಾ ವಹಿಸಹಿಸಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

 ಈ ಸಾಮೂಹಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸ್ವಯಂ ಪ್ರೇರಿತರಾಗಿ ವೈದ್ಯರ ಬಳಿ ಬಂದು  ತಪಾಸಣೆಗೊಳಗಾಗಬೇಕು. ಸರ್ಕಾರದ ವತಿಯಿಂದಲೇ  ಕ್ವಾರಂಟೈನ್ ನಲ್ಲಿಟ್ಟು, ಚಿಕಿತ್ಸೆ ನೀಡಲಾಗುತ್ತದೆ. ಭಾಗಿಯಾಗಿರುವವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ತಮ್ಮ, ತಮ್ಮ ಕುಟುಂಬದ ಹಾಗೂ ಸಮಾಜದ ಆರೋಗ್ಯದ ಸಂರಕ್ಷಣೆಗಾಗಿ ಸ್ವಯಂಪ್ರೇರಿತವಾಗಿ ವೈದ್ಯರ ಬಳಿ ಬಂದು ಆರೋಗ್ಯ ತಪಾಸಣೆಗೊಳಗಾಗಬೇಕು. ಕೊರೋನ ವೈರಸ್ ನಿಯಂತ್ರಣ ಕ್ಕಾಗಿ ಸಹಕರಿಬೇಕು ಎಂದು  ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News