ಎರಡು ತಿಂಗಳ ಪಡಿತರ ವಿತರಣೆ ಆರಂಭ; ಎ.10ರೊಳಗೆ ಪೂರ್ಣಗೊಳಿಸುವ ಗುರಿ: ಸಚಿವ ಕೆ.ಗೋಪಾಲಯ್ಯ

Update: 2020-04-01 08:36 GMT

ಬೆಂಗಳೂರು, ಎ.1: ಎಪ್ರಿಲ್ ಮತ್ತು ಮೇ ಎರಡೂ ತಿಂಗಳ ಪಡಿತರ ವಿತರಣೆ ಇಂದಿನಿಂದಲೇ ಆರಂಭಗೊಂಡಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ‌ ಇಂದೇ ಪಡಿತರ ವಿತರಣೆ ಶುರುವಾಗಲಿದೆ. ಹಳ್ಳಿಗಳಲ್ಲಿ ವಿತರಣೆಗೆ ಎರಡು ದಿನ ಸಮಯ ಬೇಕಾಗಬಹುದು. ಎಪ್ರಿಲ್ 10ರ ಒಳಗೆ ರಾಜ್ಯದ ಪಡಿತರ ವಿತರಣೆ ಪೂರ್ಣಗೊಳಿಸುವ ಗುರಿ‌ ಹೊಂದಲಾಗಿದೆ. ಎಪ್ರಿಲ್ 10ರ ನಂತರ ಕೇಂದ್ರ ಸರ್ಕಾರದ ಪಡಿತರ ಪ್ಯಾಕೇಜ್ ವಿತರಣೆ ಶುರುವಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಕಡು ಬಡವರ ಅಂತ್ಯೋದಯ ಕಾರ್ಡು ದಾರರಿಗೆ ಎರಡು ತಿಂಗಳ 70 ಕೆಜಿ ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಯೂನಿಟ್ ಗೆ 5 ಕೆಜಿ ಅಕ್ಕಿ, ಪ್ರತಿ ಕಾರ್ಡಿಗೆ 2 ಕೆಜಿ ಗೋಧಿ ವಿತರಣೆಯಾಗಲಿದೆ ಎಂದು ವಿವರಿಸಿದ್ದಾರೆ.

ಈಗಾಗಲೇ ಬೆರಳಚ್ಚು ವಿಧಾನ ರದ್ದು ಮಾಡಲಾಗಿದೆ. ಒಟಿಪಿ ಆಧಾರದ ಹಂಚಿಕೆಯೂ ರದ್ದಾಗಬೇಕಿದೆ. ಸಾಮಾಜಿಕ ಅಂತರ ಕಾಯಲು ಒಟಿಪಿ ರದ್ದಾಗಬೇಕು ಎಂಬುದು ಪಡಿತರ ವಿತರಕರ ಆಗ್ರಹವಿದೆ. ಆದ್ದರಿಂದ ಒಟಿಪಿ ವಿಚಾರ  ಆಯಾ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News