ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಅಝೀಂ ಪ್ರೇಮ್ ಜಿ ಫೌಂಡೇಶನ್ ನಿಂದ 1,000 ಕೋಟಿ ರೂ.

Update: 2020-04-01 09:02 GMT

ಹೊಸದಿಲ್ಲಿ : ಅಝೀಂ ಪ್ರೇಮ್ ಜಿ ಫೌಂಡೇಶನ್, ವಿಪ್ರೋ ಲಿಮಿಟೆಡ್ ಹಾಗೂ ವಿಪ್ರೋ ಎಂಟರ್ ಪ್ರೈಸಸ್ ದೇಶದಲ್ಲಿ ಕೋವಿಡ್-19 ಸೋಂಕಿನಿಂದಾಗಿ ಎದುರಾಗಿರುವ ಸಮಸ್ಯೆಯನ್ನು ನಿಭಾಯಿಸಲು 1,125 ಕೋಟಿ ರೂ. ನೀಡುವುದಾಗಿ ತಿಳಿಸಿವೆ.

ಈ ಕುರಿತಂತೆ ಅಝೀಂ ಪ್ರೇಮ್‍ ಜಿ ಫೌಂಡೇಶನ್ ಹಾಗೂ ವಿಪ್ರೋ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿವೆ ಹಾಗೂ ದೇಶ ಎದುರಿಸುತ್ತಿರುವ ಈ ಅಭೂತಪೂರ್ವ ಆರೋಗ್ಯ  ಸಮಸ್ಯೆ  ಹಾಗೂ ಬಿಕ್ಕಟ್ಟನ್ನು ನಿಭಾಯಿಸಲು ಈ ಮೊತ್ತವನ್ನು ನೀಡುತ್ತಿರುವುದಾಗಿ ಹೇಳಿವೆ. ಈ ಮೊತ್ತವು ಕೋವಿಡ್-19 ವಿರುದ್ಧ ಸೆಣಸಾಡುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳಿಗೆ ಸಹಾಯಕವಾಗಲಿವೆ ಎಂದೂ ಸಂಸ್ಥೆ ತಿಳಿಸಿದೆ.

ಒಟ್ಟು ದೇಣಿಗೆ ಮೊತ್ತದ ಪೈಕಿ ವಿಪ್ರೋ ಲಿಮಿಟೆಡ್ ಪಾಲು 100 ಕೋಟಿ ರೂ. ಆಗಿದ್ದರೆ ವಿಪ್ರೋ ಎಂಟರ್‍ಪ್ರೈಸಸ್ ರೂ 25 ಕೋಟಿ ನೀಡುವುದಾಗಿ ತಿಳಿಸಿದೆ. 1,000 ಕೋಟಿ  ರೂ. ನೆರವನ್ನು ಅಝೀಂ ಪ್ರೇಮ್ ಜಿ ಫೌಂಡೇಶನ್ ಒದಗಿಸಲಿದೆ.

ಕಳೆದ ವರ್ಷ ಅಝೀಂ ಪ್ರೇಮ್ ಜಿ ಅವರು ಅವರು 52,750 ಕೋಟಿ ರೂ. ಅಥವಾ ತಮ್ಮ ಸಂಸ್ಥೆಯ ಶೇ 34 ರಷ್ಟು ಷೇರುಗಳನ್ನು  ಅಝೀಂ ಪ್ರೇಮ್ ಜಿ ಫೌಂಡೇಶನ್‍ ಗೆ ನೀಡುವುದಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News