ರಾಸಾನಿಯಕ ಕಂಪೆನಿಗಳಿಂದ 136 ಕೋಟಿ ರೂ. ದೇಣಿಗೆ: ಡಿ.ವಿ.ಸದಾನಂದಗೌಡ

Update: 2020-04-04 15:36 GMT

ಬೆಂಗಳೂರು, ಎ.4: ಕೊರೋನ ರೋಗದ ಪರಿಹಾರದ ಕಾರ್ಯಕ್ಕಾಗಿ ರಸಗೊಬ್ಬರ ಮತ್ತು ರಾಸಾಯನಿಕ ಕಂಪೆನಿಗಳು ಹಾಗೂ ಔಷಧಿ ಉದ್ಯಮಗಳು ಇಲ್ಲಿಯವರೆಗೂ 136.52 ಕೋಟಿ ರೂ.ವನ್ನು ಪ್ರಧಾನಮಂತ್ರಿ ತುರ್ತು ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಡಿ ಬರುವ ಹಲವು ಸಾರ್ವಜನಿಕ ಉದ್ದಿಮೆಗಳ ನೌಕರರು ಒಂದು ದಿನದ ಸಂಬಳ ನೀಡಿದ್ದಾರೆ. ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ 8 ವಿಧಾನಸಭಾ ಕ್ಷೇತ್ರಗಳು, ವಾರ್ಡ್‍ಗಳು, ಪಕ್ಷದ ಮಂಡಳಿ ವತಿಯಿಂದ ಕಾರ್ಯ ದಳಗಳನ್ನು ರಚಿಸಿ ಪರಿಹಾರಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.

ಪ್ರತಿ ವಾರ್ಡ್‍ನಲ್ಲಿಯೂ ಸಹಾಯವಾಣಿ ಸ್ಥಾಪಿಸಲಾಗಿದ್ದು, ಅಗತ್ಯ ಇದ್ದವರಿಗೆಲ್ಲ ಆಹಾರ, ಔಷಧಿ ಮತ್ತಿತರ ಸಾಮಗ್ರಿಗಳನ್ನು ನಮ್ಮ ಕಾರ್ಯಕರ್ತರು ಪೂರೈಸುತ್ತಿದ್ದಾರೆ ಎಂದು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News