ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಮೂವರ ಬಂಧನ

Update: 2020-04-04 16:32 GMT

ಬೆಂಗಳೂರು, ಎ.4: ಲಾಕ್‍ಡೌನ್ ವೇಳೆ ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಹುಳಿಮಾವು ಠಾಣೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಳಿಮಾವು ನಿವಾಸಿಗಳಾದ ರವಿ(24), ರೋಹಿತ್(26) ಮತ್ತು ಪ್ರವೀಣ್(25) ಬಂಧಿತ ಆರೋಪಗಳೆಂದು ತಿಳಿದುಬಂದಿದೆ.

ಬಂಧಿತರು ಕಳೆದ ಎ.1 ರಂದು ದೊಡ್ಡಕಮ್ಮನಹಳ್ಳಿಯ ಜುಂಜಪ್ಪ ಸರ್ಕಲ್ ಬಳಿ ಮುಖ್ಯ ಪೇದೆ ರಾಜೇಶ್ವರಿ, ಮಹಿಳಾ ಪೇದೆ ಹೇಮಾ ಮತ್ತು ಚಿಕ್ಕಪ್ಪ ಎಂಬುವರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವವರು ಮತ್ತು ವಾಹನಗಳ ತಪಾಸಣೆ ನಡೆಸುತ್ತಿದ್ದರು.

ಈ ವೇಳೆ ಅದೇ ಮಾರ್ಗದಲ್ಲಿ ಬೈಕ್‍ನಲ್ಲಿ ಬಂದ ಮೂವರನ್ನು ತಡೆದು ತಪಾಸಣೆ ನಡೆಸುವ ವೇಳೆ ಘಟನೆ ನಡೆದಿದೆ. ಪಾಸ್ ಇಲ್ಲದೆಯೇ, ಅನವಶ್ಯಕವಾಗಿ ಓಡಾಡುತ್ತಿರುವುದು ಕಂಡು ಬಂದಿದ್ದರಿಂದ ಮೂವರನ್ನೂ ತಡೆದು ನಿಲ್ಲಿಸಿ ತಪಾಸಣೆಗೆ ಒಳಪಡಿಸಲಾಗಿತ್ತು. ಇದೇ ಕಾರಣಕ್ಕೆ ಕರ್ತವ್ಯನಿರತ ಸಿಬ್ಬಂದಿ ಜತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಮಹಿಳಾ ಪೇದೆ ಹೇಮಾ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News