ಪಾಕ್: 2 ಸಾವಿರ ದಾಟಿದ ಸೋಂಕಿತರ ಸಂಖ್ಯೆ

Update: 2020-04-04 17:30 GMT

ಇಸ್ಲಾಮಾಬಾದ್, ಎ.4: ಕೊರೋನ ವೈರಸ್ ಆರ್ಭಟಕ್ಕೆ ತತ್ತರಿಸಿರುವ ಪಾಕಿಸ್ತಾನದಲ್ಲಿ ಶನಿವಾರ ಸೋಂಕು ಪೀಡಿತರ ಸಂಖ್ಯೆ 2708ಕ್ಕೇರಿದೆ. ದೇಶದ ಅರ್ಧ ಭಾಗದಷ್ಟು ಜನಸಂಖ್ಯೆಯಿರುವ ಪಂಜಾಬ್ ಪ್ರಾಂತ್ಯದಲ್ಲಿ ಈ ಮಾರಕ ರೋಗ ತೀವ್ರವಾಗಿ ಹರಡಿದ್ದು, ಅಲ್ಲಿ ಸೋಂಕಿತರ ಸಂಖ್ಯೆ 1 ಸಾವಿರವನ್ನು ದಾಟಿದೆ.

ಪಾಕಿಸ್ತಾನದಲ್ಲಿ ಕೊರೋನವೈರಸ್ ಈವರೆಗೆ 40ಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡಿದ್ದರೆ, 130 ರೋಗಿಗಳು ಗುಣಮುಖರಾಗಿದ್ದಾರೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ಸರಕಾರವು ತ್ವರಿತ ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ ಅದು ಕ್ಷಿಪ್ರವಾಗಿ ವ್ಯಾಪಿಸುತ್ತಿದೆಯೆಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನ ವೈರಸ್ ಹಾವಳಿಯಿಂದಾಗಿ ದೇಶದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ನಿಭಾಯಿಸಲು ಪಾಕಿಸ್ತಾನಕ್ಕೆ 200 ದಶಲಕ್ಷ ಡಾಲರ್ ನೆರವನ್ನು ವಿಶ್ವಬ್ಯಾಂಕ್‌ಶುಕ್ರವಾರ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News