ಕೊರೋನ ವೈರಸ್: ಮುಂಬೈನ ಧಾರಾವಿಯಲ್ಲಿ ಇನ್ನೆರಡು ಪ್ರಕರಣಗಳು,ಸೋಂಕಿತರ ಸಂಖ್ಯೆ 5ಕ್ಕೇರಿಕೆ

Update: 2020-04-04 18:03 GMT

ಮುಂಬೈ, ಎ.4: ಏಷ್ಯಾದ ಅತ್ಯಂತ ದೊಡ್ಡ ಕೊಳಗೇರಿಯಾಗಿರುವ ಮುಂಬೈ ವಿಮಾನ ನಿಲ್ದಾಣದ ಸಮೀಪದ ಧಾರಾವಿಯಲ್ಲಿ ಶನಿವಾರ ಇನ್ನೂ ಇಬ್ಬರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಈ ಜನನಿಬಿಡ ಪ್ರದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಐದಕ್ಕೇರಿದೆ. ಶನಿವಾರದ ಎರಡು ಪ್ರಕರಣಗಳಿಗೆ ಮುನ್ನ 35ರ ಹರೆಯದ ವೈದ್ಯನೋರ್ವನಲ್ಲಿ ಸೋಂಕು ಪತ್ತೆಯಾಗಿತ್ತು.

ಎಲ್ಲ ಐದೂ ರೋಗಿಗಳನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು,ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ಐದು ಚ.ಕಿ.ಮೀ.ವಿಸ್ತೀರ್ಣದ ಧಾರಾವಿಯಲ್ಲಿ ಕೊಳಕು ಓಣಿಗಳ ನಡುವಿನ ರೆಪಡಿಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನರು ಬದುಕು ಸಾಗಿಸುತ್ತಿದ್ದಾರೆ. ಇಲ್ಲಿಯ ಶೇ.70ಕ್ಕೂ ಅಧಿಕ ನಿವಾಸಿಗಳು ಸಮುದಾಯ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಚರ್ಮದ ಸರಕುಗಳು,ಮಣ್ಣಿನ ಪಾತ್ರೆಗಳು,ಜವಳಿ ಸೇರಿದಂತೆ ಹಲವಾರು ತಯಾರಿಕಾ ಘಟಕಗಳು ಮತ್ತು ವರ್ಕ್‌ಶಾಪ್‌ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಕೊರೋನ ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಮುಖ್ಯವಾಗಿರುವ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅತ್ಯಂತ ಜನಸಾಂದ್ರತೆಯ ಧಾರಾವಿಯಲ್ಲಿ ಬೃಹತ್ ಸವಾಲು ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News