ಅಲಿಪುರ ಮಸೀದಿಯ ಮೇಲೆ ದಾಳಿ ಪ್ರಕರಣ: ದಿಲ್ಲಿ ಪೊಲೀಸ್ ಆಯುಕ್ತರಿಗೆ ನೋಟಿಸ್

Update: 2020-04-04 18:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.4: ಶುಕ್ರವಾರ (ಎಪ್ರಿಲ್ 3) ರಾತ್ರಿ ವಾಯುವ್ಯ ದಿಲ್ಲಿಯ ಆಲಿಪುರದಲ್ಲಿ ಮಸೀದಿಯ ಮೇಲೆ ಗುಂಪೊಂದು ಆಕ್ರಮಣ ನಡೆಸಿ ಬೆಂಕಿ ಹಚ್ಚಿದ ಘಟನೆಯ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸ್ ಆಯುಕ್ತರಿಗೆ ದಿಲ್ಲಿ ಅಲ್ಪಸಂಖ್ಯಾತ ಆಯೋಗ ನೋಟಿಸ್ ಜಾರಿಗೊಳಿಸಿದೆ.

ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಸುಮಾರು 200 ಜನರಿದ್ದ ತಂಡವು ಆಲಿಪುರ ಠಾಣಾ ವ್ಯಾಪ್ತಿಯ ಮಖ್ಮೇಲ್‌ಪುರ ಗ್ರಾಮದಲ್ಲಿರುವ ಮಸೀದಿಯ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದು ಮಸೀದಿ ಭಾಗಷಃ ಸುಟ್ಟುಹೋಗಿದೆ. ಅಲ್ಲದೆ ಮಸೀದಿಯ ಛಾವಣಿ ಸೇರಿದಂತೆ ಹಲವು ಭಾಗಗಳನ್ನು ಧ್ವಂಸ ಮಾಡಲಾಗಿದ್ದು ಈ ವೇಳೆ ಮೂರು ಮಂದಿ ಮಸೀದಿಯ ಒಳಗಿದ್ದರು. ಈ ಕುರಿತ ವರದಿ ಮತ್ತು ವೀಡಿಯೊ ತುಣುಕು ಆಯೋಗಕ್ಕೆ ಲಭ್ಯವಾಗಿದೆ. ಈ ಬಗ್ಗೆ ದಿಲ್ಲಿ ಪೊಲೀಸ್ ಆಯುಕ್ತರಿಗೆ ಈ ಮೊದಲು ಕಳಿಸಿದ್ದ ನೋಟಿಸ್‌ಗೆ ಉತ್ತರ ಬಾರದಿದ್ದರಿಂದ ಪ್ರತ್ಯೇಕ ನೋಟಿಸ್ ಕಳುಹಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಝರುಲ್ ಇಸ್ಲಾಮ್ ಖಾನ್ ಹೇಳಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು . ಈ ಪ್ರಕರಣವನ್ನು ರಾಜಿ ಮಾತುಕತೆಯಲ್ಲಿ ಮುಗಿಸಿದರೆ ಕಿಡಿಗೇಡಿಗಳಿಗೆ ಇನ್ನಷ್ಟು ಪ್ರೋತ್ಸಾಹ ದೊರಕಬಹುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News