ಡಯಾಗ್ನಾಸ್ಟಿಕ್ ಕಿಟ್‌ಗಳ ರಫ್ತಿಗೆ ನಿರ್ಬಂಧ

Update: 2020-04-04 18:14 GMT

ಹೊಸದಿಲ್ಲಿ, ಎ. 4: ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಡಯಾಗ್ನಾಸ್ಟಿಕ್ (ರೋಗ ನಿರ್ಧಾರ ಮಾಡುವ ) ಕಿಟ್‌ಗಳನ್ನು ರಫ್ತು ಮಾಡುವುದಕ್ಕೆ ಸರಕಾರ ಶನಿವಾರ ನಿರ್ಬಂಧ ವಿಧಿಸಿದೆ.

ಡಯಗ್ನಾಸ್ಟಿಕ್ ಕಿಟ್(ಪ್ರಯೋಗಾಲಯ ಕಾರಕಗಳು, ರೋಗ ನಿರ್ಧಾರ ಸಾಧನ ಇತ್ಯಾದಿ)ಗಳ ರಫ್ತು ಪ್ರಕ್ರಿಯೆಯನ್ನು ತಕ್ಷಣದಿಂದಲೇ ಅನ್ವಯಿಸುವಂತೆ ನಿರ್ಬಂಧಿಸಲಾಗಿದೆ ಎಂದು ವಿದೇಶ ವ್ಯಾಪಾರಗಳ ಮಹಾ ನಿರ್ದೇಶನಾಲಯ(ಡಿಜಿಎಫ್‌ಟಿ)ದ ಅಧಿಸೂಚನೆಯಲ್ಲಿ ತಿಳಿಸಿದೆ.

ಕೊರೋನ ವೈರಸ್ ಸೋಂಕಿತರನ್ನು ಪರೀಕ್ಷಿಸಲು ಬಳಸುವ ಸ್ಕ್ರೀನ್ ಟೆಸ್ಟಿಂಗ್ ಕಿಟ್‌ಗಳ ಕೊರತೆಯಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಸರಕಾರದ ಈ ಕ್ರಮ ಕೈಗೊಂಡಿದ್ದು ಈ ಕಿಟ್‌ಗಳನ್ನು ರಫ್ತು ನಿರ್ಬಂಧಿತ ವರ್ಗದಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿದೆ. ಇನ್ನು ಇಂತಹ ಕಿಟ್‌ಗಳನ್ನು ರಫ್ತು ಮಾಡಬೇಕಿದ್ದರೆ ಡಿಜಿಎಫ್‌ಟಿಯ ಲೈಸೆನ್ಸ್ ಕಡ್ಡಾಯವಾಗಿದೆ. ಈ ಮುನ್ನ, ಇಂತಹ ಕಿಟ್‌ಗಳನ್ನು ರಫ್ತು ಮಾಡುವುದಕ್ಕೆ ಯಾವುದೇ ನಿರ್ಬಂಧವಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News