ಹಿಂದುಳಿದ-ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 108.42 ಕೋಟಿ ರೂ. ಅನುದಾನ

Update: 2020-04-20 17:44 GMT

ಬೆಂಗಳೂರು, ಎ.20: ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ವೈಯಕ್ತಿಕ ಕಾರ್ಯಕ್ರಮಗಳು ಮತ್ತು ಮೂಲಭೂತ ಸೌಕರ್ಯಗಳಿಗೆ 2020-21ನೇ ಸಾಲಿನ ಬಿಬಿಎಂಪಿ ಬಜೆಟ್‍ನಲ್ಲಿ ಒಟ್ಟಾರೆ 108.42 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.

►ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವೈಯಕ್ತಿಕ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ 44.50 ಕೋಟಿ ರೂ.ಅನುದಾನ ಮೀಸಲಿರಿಸಿದೆ.
►ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸಲು 2 ಕೋಟಿ ರೂ. ಅನುದಾನ ಒದಗಿಸಿದೆ.
►ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸಲು 5 ಕೋಟಿ ರೂ. ಅನುದಾನ ಮೀಸಲಿರಿಸಿದೆ.
►ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಾಸಿಸುತ್ತಿರುವ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಚರಂಡಿ ನಿರ್ಮಿಸುವುದು ಹಾಗೂ ಇತರೇ ಸಿವಿಲ್ ಕಾಮಗಾರಿಗಳಿಗಾಗಿ 15 ಕೋಟಿ ರೂ. ಅನುದಾನದ ಅವಕಾಶ ಕಲ್ಪಿಸಿದೆ.
ವಿಶೇಷ ಚೇತನ ಕಲ್ಯಾಣ ಕಾರ್ಯಕ್ರಮ:
►ವಿಶೇಷ ಚೇತನರ ವೈಯಕ್ತಿಕ ಮನೆ ಹೊಂದುವ ಸಲುವಾಗಿ ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ 30 ಕೋಟಿ ರೂ. ಅನುದಾನ ಮೀಸಲಿರಿಸಿದೆ. 
►ವಿಶೇಷ ಚೇತನರ ಆರೋಗ್ಯ ಕಾರ್ಯಕ್ರಮಗಳನ್ನು ರೂಪಿಸಲು 5 ಕೋಟಿ ರೂ. ಅನುದಾನ ಒದಗಿಸಿದೆ.
►ವಿಶೇಷ ಚೇತನರ ಶಿಕ್ಷಣ ಕಾರ್ಯಕ್ರಮಗಳನ್ನು ರೂಪಿಸಲು 4.80 ಕೋಟಿ ರೂ. ಅನುದಾನ ಮೀಸರಿಸಿದೆ.
►ವಿಶೇಷ ಚೇತನರ ಸ್ವಂತ ಉದ್ಯೋಗ ಹೊಂದುವ ಕಾರ್ಯಕ್ರಮಗಳನ್ನು ರೂಪಿಸಲು 5 ಕೋಟಿ ರೂ. ಅನುದಾನ ಒದಗಿಸಿದೆ.
►ವಿಶೇಷ ಚೇತನರಿಗೆ ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ ಒಂದು ಕೋಟಿ ರೂ. ಅನುದಾನ ಮೀಸಲಿರಿಸಿದೆ.
►ಪ್ರತಿ ವಾರ್ಡ್‍ಗೆ 10 ವಾಹನಗಳಂತೆ, ತ್ರಿಚಕ್ರ ವಾಹನ ಒದಗಿಸಲು ಉದ್ದೇಶಿಸಿದ್ದು, 10 ಕೋಟಿ ರೂ. ಅನುದಾನದ ಅವಕಾಶ ಕಲ್ಪಿಸಿದೆ.
►ದಿವ್ಯಾಂಗ ಚೇತನರ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ  ಭಾಗವಹಿಸಲು ಅನುಕೂಲವಾಗುವಂತೆ ಆರ್ಥಿಕ ಸಹಾಯ ಮಾಡಲು 1.50 ಕೋಟಿ ರೂ. ಅನುದಾನ ಒದಗಿಸಿದೆ. 
►ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳು, ರ್ಯಾಂಪ್‍ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ 10 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
►ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಶಾಲೆಗಳನ್ನು ನಡೆಸುತ್ತಿರುವ ದತ್ತಿ ಶಿಕ್ಷಣ ಸಂಸ್ಥೆಗಳು ಹಾಗೂ ಸಂಘ, ಸಂಸ್ಥೆಗಳಿಗೆ ಆರ್ಥಿಕವಾಗಿ ಸಹಾಯಧನ ನೀಡಿ ಪ್ರೋತ್ಸಾಹಿಸಲು 5 ಕೋಟಿ ರೂ. ಅನುದಾನ ಮೀಸಲಿರಿಸಿದೆ.

ಪಾಲಿಕೆಯ ಎಲ್ಲ ವಾರ್ಡ್‍ಗಳಲ್ಲಿ ಮಹಿಳೆಯರಿಗಾಗಿಯೇ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರತಿ ವಾರ್ಡ್‍ಗೆ 5 ಲಕ್ಷ ರೂ.ಗಳಂತೆ ವಿಶೇಷ ಅನುದಾನವನ್ನು ಒದಗಿಸಲಾಗಿದ್ದು, ಒಟ್ಟಾರೆ 9.90 ಕೋಟಿ ರೂ. ಅನದಾನ ಮೀಸಲಿರಿಸಲಾಗಿದೆ.

ಒಂದು ವರ್ಷದವರೆಗೆ ಉಚಿತ ಕಾವೇರಿ ನೀರು
ನಗರದ ಜನತೆಗೆ ಒಂದು ವರ್ಷದವರಿಗೆ 10 ಸಾವಿರ ಲೀಟರ್‍ವರೆಗೆ ಉಚಿತ ಕಾವೇರಿ ನೀರನ್ನು ಒದಗಿಸಲು ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಲಾಗಿದೆ. 

ಉಚಿತ ಕಾವೇರಿ ನೀರು ಕಾರ್ಯಕ್ರಮದ ಅಂಗವಾಗಿ ಮಾಸಿಕ 10 ಸಾವಿರ ಲೀಟರ್ ಒಳಗೆ ಬಳಸುವ ಗೃಹೋಪಯೋಗಿ ಬಳಕೆದಾರರಿಗೆ ಉಚಿತವಾಗಿ ಕಾವೇರಿ ನೀರು ಒದಗಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ವಾರ್ಷಿಕ 43 ಕೋಟಿ ರೂ. ಮೊತ್ತವನ್ನು ಪಾಲಿಕೆ ವತಿಯಿಂದಲೇ ಬಿಡ್ಲ್ಯುಎಸ್ಸೆಸ್‍ಬಿಗೆ ಪಾವತಿಸಲಾಗತ್ತದೆ. ಇದರಿಂದ ನಗರದ 2.50 ಲಕ್ಷ ಕಟುಂಬಗಳಿಗೆ ಅನುಕೂಲವಾಗಲಿದೆ ಎಂದು ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಸ್.ಶ್ರೀನಿವಾಸ್ ತಿಳಿಸಿದ್ದಾರೆ.

ಸಾಮಾನ್ಯ ವರ್ಗದ ಕಲ್ಯಾಣಕ್ಕಾಗಿ 604.12 ಕೋಟಿ ರೂ. ಅನುದಾನ
ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರನ್ನು ಉತ್ತೇಜಿಸುವುದಕ್ಕಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 2020-21ನೇ ಸಾಲಿನ ಬಿಬಿಎಂಪಿ ಬಜೆಟ್‍ನಲ್ಲಿ ಒಟ್ಟಾರೆ 604.12ಕೋಟಿ ರೂ.ವನ್ನು ಮೀಸಲಿರಿಸಲಾಗಿದೆ.

►ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಾಮಾನ್ಯ ವರ್ಗದವರು ವೈಯಕ್ತಿಕ ಮನೆ ಹೊಂದಲು ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ ಒಟ್ಟಾರೆ 15 ಕೋಟಿ ರೂ.ಅನುದಾನ ಮೀಸಲಿರಿಸಿದೆ.
►ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 1.50 ಕೋಟಿ ರೂ. ಅನುದಾನ ಮೀಸಲಿರಿಸಿದೆ.
►ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಗಳಿಗೆ 5 ಕೋಟಿ ರೂ. ಅನುದಾನ ಒದಗಿಸಲಾಗಿದೆ.
►ಅನಂತ್‍ಕುಮಾರ್‍ರವರ ಹೆಸರಿನಲ್ಲಿ ಪಾಲಿಕೆಯ ಎಲ್ಲ ವಾರ್ಡ್‍ಗಳಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲು ಪ್ರತಿ ವಾರ್ಡ್‍ಗೆ 15 ಲ್ಯಾಪ್‍ಟಾಪ್‍ಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 15 ಕೋಟಿ ರೂ.ಅನುದಾನ ಮೀಸಲಿರಿಸಿದೆ.
►ನಿರಾಶ್ರಿತರಿಗೆ ರಾತ್ರಿ ತಂಗುದಾಣವನ್ನು ನಿರ್ಮಾಣ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಒಂದು ಕೋಟಿ ರೂ.ಅನುದಾನ ಒದಗಿಸಿದೆ.
►ಪ್ರತಿ ವಾರ್ಡ್‍ಗೆ 50 ಟೈಲರಿಂಗ್ ಯಂತ್ರ ವಿತರಿಸುವುದಕ್ಕಾಗಿ 4 ಕೋಟಿ ರೂ. ಅನುದಾನ ಮೀಸಲಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News