ಐಟಿ ಕಂಪೆನಿ ತೆರೆಯಲು ನಿಯಮ ಸಡಿಲಿಕೆ ಬೆನ್ನಲ್ಲೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್

Update: 2020-04-20 17:46 GMT

ಬೆಂಗಳೂರು, ಎ.20: ಸಿಲಿಕಾನ್‍ಸಿಟಿ ಎಂದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೊದಲು ಮೂಡುತ್ತಿದ್ದ ಒಂದು ಸಂಗತಿಯೆಂದರೇ ಅದು ಟ್ರಾಫಿಕ್ ಜಾಮ್ ಆಗಿತ್ತು. ಆದರೆ, ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಲಾಕ್‍ಡೌನ್ ಜಾರಿಯಾದ ಮೇಲೆ ಟ್ರಾಫಿಕ್‍ಗೆ ಕಡಿವಾಣ ಬಿದ್ದಿತ್ತು. 
ಆದರೆ, ಈಗ ಸರಕಾರ ಕೆಲ ಷರತ್ತುಗಳನ್ನು ವಿಧಿಸಿ ಐಟಿ ಕಂಪೆನಿಗಳನ್ನು ತೆರೆಯಲು ಅವಕಾಶ ನೀಡಿದ ಬೆನ್ನಲ್ಲೇ ನಗರದ ಕಾವೇರಿ ಜಂಕ್ಷನ್ ಬಳಿ ನೂರಾರು ವಾಹನಗಳು ಸರತಿ ಸಾಲಿನಲ್ಲಿ ನಿಂತು ಟ್ರಾಫಿಕ್ ಜಾಮ್ ಆಗಿದ್ದು ವಿಶೇಷವಾಗಿತ್ತು. 

ಮುಖ್ಯರಸ್ತೆಯಲ್ಲಿ ಜಾಮ್ ಆಗುವಷ್ಟು ವಾಹನಗಳು ಇಂದು ರಸ್ತೆಗಳಿದಿವೆ. ಲಾಕ್‍ಡೌನ್ ಸಂದರ್ಭದಲ್ಲೂ ಎಂದಿನಂತೆ ವಾಹನ ಸಂಚಾರ ಆರಂಭವಾಗಿದೆ. ಅದಕ್ಕಿಂತಲೂ ನೂರಾರು ವಾಹನಗಳಿಗೆ ಪಾಸ್ ಅಂಟಿಸಿದ್ದನ್ನು ಕಂಡ ಪೋಲಿಸರಿಗೆ ಆಶ್ಚರ್ಯವಾಗಿದೆ.

ಇದರಿಂದ, ಪೋಲಿಸರಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂಬ ವಿಚಾರ ಹೊಳೆಯುತ್ತಿಲ್ಲ. ಸರಕಾರದ ಆದೇಶವನ್ನು ಮಾತ್ರ ಪಾಲಿಸಲು ಮುಂದಾಗಿದ್ದು, ಇನ್ನೆಷ್ಟು ಜನರಿಗೆ ಸೋಂಕು ಹರಡುತ್ತದೆಯೋ ಎಂಬ ಬಗ್ಗೆ ಹೆಸರು ಹೇಳಲು ಇಚ್ಛಿಸದ ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News