ಇರಾನ್ ನಲ್ಲಿ ತೆರೆದ ಮಸೀದಿಗಳ ಬಾಗಿಲು

Update: 2020-05-05 15:17 GMT

ಟೆಹರಾನ್, ಮೇ 5: ಕೊರೋನ ವೈರಸ್ ಸಾಂಕ್ರಾಮಿಕದ ತೀವ್ರತೆ ಕಡಿಮೆಯಿರುವ ಸ್ಥಳಗಳಲ್ಲಿ ಇರಾನ್ ಸೋಮವಾರ ಮಸೀದಿಗಳನ್ನು ತೆರೆದಿದೆ.

ಅದೇ ವೇಳೆ, ಸೋಂಕು ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 80,000 ಮಂದಿ ಗುಣ ಹೊಂದಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅದು ಹೇಳಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್-19ರಿಂದಾಗಿ 74 ಸಾವುಗಳು ಸಂಭವಿಸಿದ್ದು, ಈ ರೋಗದಿಂದಾಗಿ ಸಾವಿಗೀಡಾದವರ ಒಟ್ಟು ಅಧಿಕೃತ ಸಂಖ್ಯೆ 6,277ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು.

ಇರಾನ್‌ನಲ್ಲಿ ರವಿವಾರ 47 ಸಾವುಗಳು ದಾಖಲಾಗಿದ್ದವು. ಅದು 55 ದಿನಗಳ ಅವಧಿಯಲ್ಲೇ ಕನಿಷ್ಠ ಸಂಖ್ಯೆಯಾಗಿದೆ.

ಸಾಂಕ್ರಾಮಿಕದ ಅಪಾಯ ಕಡಿಮೆ ಎಂದು ಭಾವಿಸಲಾದ ಇರಾನ್‌ನ 132 ಜಿಲ್ಲೆಗಳಲ್ಲಿ ಸೋಮವಾರ ಮಸೀದಿಗಳ ಬಾಗಿಲನ್ನು ತೆರೆದು ಭಕ್ತರಿಗೆ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News