217 ಕಾರ್ಮಿಕರಿಗೆ 3,497 ಕೋಟಿ ರೂ. !: ನಗೆಪಾಟಲಿಗೀಡಾದ ಬಿಜೆಪಿಯ ಸಂಖ್ಯಾ ಪ್ರಮಾದ

Update: 2020-05-05 15:25 GMT

ಬೆಂಗಳೂರು: ಬಿಜೆಪಿ ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆ ಸಂಖ್ಯಾ ಪ್ರಮಾದವೊಂದನ್ನು ಮಾಡಿ ನಗೆಪಾಟಲಿಗೀಡಾಗಿದೆ. “ಪಿಎಂ ನರೇಂದ್ರಮೋದಿ ಸರಕಾರ ಕೋವಿಡ್ ಸಂದರ್ಭ ಕಾರ್ಮಿಕರಿಗೆ ಬೆಂಬಲ ನೀಡುತ್ತಿದೆ. 217 ನಿರ್ಮಾಣ ಕಾರ್ಮಿಕರಿಗೆ 3497 ಕೋಟಿ ರೂ. ಆರ್ಥಿಕ ಸಹಾಯ ನೀಡಲಾಗಿದೆ, ಮನ್‍ರೇಗಾ ಅಡಿಯಲ್ಲಿ ರಾಜ್ಯಗಳಿಗೆ ರೂ 20,266 ಕೋಟಿ ಬಿಡುಗಡೆಗೊಳಿಸಲಾಗಿದೆ. 10.6 ಲಕ್ಷ ಉದ್ಯೋಗಿಗಳಿಗೆ ರೂ 16,211 ಕೋಟಿ ವರ್ಗಾಯಿಸಲಾಗಿದೆ,'' ಎಂಬ ಪಕ್ಷ ಟ್ವೀಟ್ ಮಾಡಿತ್ತು.

ಆದರೆ ಈ ಟ್ವೀಟ್‍ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದ ಅಂಶ 217 ಕಾರ್ಮಿಕರಿಗೆ ರೂ 3497 ಕೋಟಿ ಆರ್ಥಿಕ ಸಹಾಯ.'' ಈ ಪ್ರಮಾದದ ಕುರಿತಂತೆ ಟ್ವಿಟ್ಟರಿಗರು ಬಿಜೆಪಿಯ ಗಮನ ಸೆಳೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪಕ್ಷ, ಹಾಗಲ್ಲ `217 ಕೋಟಿ ಕಾರ್ಮಿಕರಿಗೆ' ಎಂದು ಟ್ವೀಟ್ ಮಾಡಿತಲ್ಲದೆ ಮತ್ತೆ ಅದನ್ನು ತಿದ್ದಿ `2.17' ಕಾರ್ಮಿಕರು ಎಂದು ಬರೆದಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಟ್ಟರಿಗರೊಬ್ಬರು ``ವಾಹ್,  ತಲಾ ನಿರ್ಮಾಣ ಕಾರ್ಮಿಕನಿಗೆ 16 ಕೋಟಿ, ನಾನು ಕೂಡ ನಿರ್ಮಾಣ ಕಾರ್ಮಿಕನಾಗುತ್ತೇನೆ,'' ಎಂದು ಬರೆದಿದ್ದಾರೆ. “ಇಷ್ಟೊಂದು ದೊಡ್ಡ ಮೊತ್ತದ ಸಹಾಯ ಯಾವುದೇ ದೇಶದಲ್ಲೂ ಮೊದಲು'' ಎಂದು ಇನ್ನೊಬ್ಬರು ಟ್ವಿಟ್ಟರಿಗರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News