40 ಲಕ್ಷ ದಾಟಿದ ಜಾಗತಿಕ ಕೊರೋನ ಸೋಂಕು ಪೀಡಿತರ ಸಂಖ್ಯೆ

Update: 2020-05-10 17:23 GMT
ಸಾಂದರ್ಭಿಕ ಚಿತ್ರ

ಪ್ಯಾರಿಸ್, ಮೇ 10: ಜಗತ್ತಿನಾದ್ಯಂತ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಶನಿವಾರ 40 ಲಕ್ಷದ ಗಡಿಯನ್ನು ದಾಟಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ದಾಖಲಿಸಿರುವ ಅಂಕಿ-ಅಂಶಗಳು ತಿಳಿಸಿವೆ.

ಈಗ ಜಗತ್ತಿನಾದ್ಯಂತ ಒಟ್ಟು 40,01,437ಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 2,77,127 ಮಂದಿ ಸಾವನ್ನಪ್ಪಿದ್ದಾರೆ.

ಅಮೆರಿಕವು 78,618 ಸಾವಿನ ಸಂಖ್ಯೆಯೊಂದಿಗೆ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. ಯುರೋಪ್ ಅತಿ ಹೆಚ್ಚು ಬಾಧಿತ ಖಂಡವಾಗಿದ್ದು, ಅಲ್ಲಿ 17,08,648 ಒಟ್ಟು ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 1,55,074 ಮಂದಿ ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ವರದಿಯಾಗಿರುವ ಸೋಂಕು ಪ್ರಕರಣಗಳ ಸಂಖ್ಯೆಯು ನೈಜ ಸಂಖ್ಯೆಗಿಂತ ತುಂಬಾ ಕಡಿಮೆಯಾಗಿರುವ ಸಾಧ್ಯತೆಯಿದೆ. ಯಾಕೆಂದರೆ, ಹೆಚ್ಚಿನ ದೇಶಗಳಲ್ಲಿ ಗಂಭೀರ ಪ್ರಕರಣಗಳಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ.

ಸ್ಪೇನ್: ಕೊರೋನ ಪೀಡಿತರ ದೈನಂದಿನ ಸಾವು 179ಕ್ಕೆ ಇಳಿಕೆ

ಕೊರೋನ ವೈರಸ್‌ನ ಭೀಕರ ದಾಳಿಗೊಳಗಾಗಿರುವ ದೇಶಗಳ ಪೈಕಿ ಒಂದಾಗಿರುವ ಸ್ಪೇನ್‌ನಲ್ಲಿ ಪ್ರಾಣ ಕಳೆದುಕೊಂಡವರ ದೈನಂದಿನ ಸಂಖ್ಯೆ ಶನಿವಾರ 179ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದಕ್ಕೂ ಒಂದು ದಿನ ಮೊದಲು ಅಲ್ಲಿ 229 ಮಂದಿ ಮೃತಪಟ್ಟಿದ್ದರು.

ದೇಶದಲ್ಲಿ ಸಾಂಕ್ರಾಮಿಕದಿಂದಾಗಿ ಸಾವಿಗೀಡಾಗಿರುವವರ ಒಟ್ಟು ಸಂಖ್ಯೆ ಈಗ 26,478ಕ್ಕೆ ಏರಿದೆ. ಅಲ್ಲಿ 2,23,578 ಒಟ್ಟು ಸೋಂಕು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News