ಬಾಯ ಹನಿಗಳ ಮೂಲಕ ಕೊರೋನ: ಅಧ್ಯಯನ ನೀಡಿದ ಎಚ್ಚರಿಕೆಯಿದು

Update: 2020-05-14 17:49 GMT

ವಾಶಿಂಗ್ಟನ್, ಮೇ 14: ಜನರು ಮಾತನಾಡುವಾಗ ಬಾಯಿಯಿಂದ ಹೊರ ಹಾರುವ ಸಣ್ಣ ಸಣ್ಣ ಹನಿಗಳು ಮುಚ್ಚಿದ ಕೋಣೆಗಳಲ್ಲಿ ಗಾಳಿಯಲ್ಲಿ 10 ನಿಮಿಷಗಳಿಗೂ ಹೆಚ್ಚು ಅವಧಿಗೆ ತೇಲಿಕೊಂಡು ಇರಬಹುದಾಗಿದೆ ಎಂದು ಬುಧವಾರ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ. ಈ ಮೂಲಕ ಕೊರೋನ ವೈರಸ್ ಹರಡುವ ಸಾಧ್ಯತೆಯ ಬಗ್ಗೆ ಅದು ಎಚ್ಚರಿಸಿದೆ.

ಓರ್ವ ವ್ಯಕ್ತಿಯ ಬಾಯಿಂದ ಹೊರಬಿದ್ದ ಹನಿಗಳು ಗಾಳಿಯಲ್ಲಿ ಸರಾಸರಿ 12 ನಿಮಿಷಗಳ ಕಾಲ ನಿಂತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಪ್ರೊಸೀಡಿಂಗ್ಸ್ ಆಫ್ ದ ನ್ಯಾಶನಲ್ ಅಕಾಡೆಮಿ ಆಫ್ ಸಯನ್ಸಸ್ ಆಫ್ ದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಪಿಎನ್‌ಎಎಸ್) ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ಹೇಳಿದೆ.

ಜೊಲ್ಲುರಸದಲ್ಲಿ ಕೊರೋನ ವೈರಸ್ ದಟ್ಟವಾಗಿರುತ್ತದೆ. ಓರ್ವ ವ್ಯಕ್ತಿ ಒಂದು ನಿಮಿಷ ಕಾಲ ಗಟ್ಟಿಯಾಗಿ ಮಾತನಾಡಿದಾಗ 1,000ಕ್ಕೂ ಅಧಿಕ ವೈರಸ್ ಹೊಂದಿರುವ ಹನಿಗಳು ಗಾಳಿಯನ್ನು ಸೇರುತ್ತವೆ ಹಾಗೂ ಮುಚ್ಚಿದ ಸ್ಥಳದಲ್ಲಿ ಅವುಗಳು 10 ನಿಮಿಷಕ್ಕೂ ಅಧಿಕ ಅವಧಿ ಗಾಳಿಯಲ್ಲೇ ಉಳಿಯುತ್ತವೆ. ಈ ವೈರಸ್‌ಗಳು ಮುಚ್ದಿದ ಸ್ಥಳಗಳಲ್ಲಿ ರೋಗವನ್ನು ಹರಡುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಅಧ್ಯಯನ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News