ದಿಟ್ಟ ಕ್ರಮಗಳ ಕೊರತೆಯಿಂದ ನಿರಾಸೆ: ಕೇಂದ್ರದ ಪ್ಯಾಕೇಜ್ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ

Update: 2020-05-17 17:04 GMT

ಹೊಸದಿಲ್ಲಿ: ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಬಗ್ಗೆ ಉದ್ಯಮಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಪ್ಯಾಕೇಜ್ ನಲ್ಲಿ ದಿಟ್ಟ ಕ್ರಮಗಳ ಕೊರತೆಯಿಂದ ತುಂಬಾ ನಿರಾಶೆಯಾಗಿದೆ. ಬೇಡಿಕೆ ಹೆಚ್ಚಾಗಬಹುದು ಎಂದೆನಿಸುತ್ತಿಲ್ಲ ಮತ್ತು ಆರ್ಥಿಕ ಚಟುವಟಿಕೆಗಳು ಕುಂಠಿತವಾಗಬಹುದು. 20 ಲಕ್ಷ ಕೋಟಿ ಬಹಳ ದೊಡ್ಡ ಮತ್ತು ಅದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬೇಕು” ಎಂದಿದ್ದಾರೆ,

“ಆರೋಗ್ಯ ಕ್ಷೇತ್ರದ ಸ್ಥಿತಿ ಬದಲಾಗಿದೆ. ಕೋವಿಡ್ ಸಂಬಂಧಿತ ಮಾರ್ಗಸೂಚಿಗಳಿಂದಾಗಿ ಹೆಚ್ಚಿದ ನಿರ್ವಹಣಾ ವೆಚ್ಚಗಳನ್ನು ಭರಿಸಬೇಕಾಗಿರುವ ಆಸ್ಪತ್ರೆಗೆಳಿಗೆ ಯಾವುದೇ ಉತ್ತೇಜನವಿಲ್ಲ. ಕೋವಿಡ್ ಅಲ್ಲದ ರೋಗಿಗಳ ಸಂಖ್ಯೆಯೂ 80 ಶೇ.ದಷ್ಟು ಕಡಿಮೆಯಾಗಿದೆ” ಎಂದವರು ಇನ್ನೊಂದು ಟ್ವೀಟ್ ನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News